ಬೆಳ್ತಂಗಡಿಯ ಲೀನಾ ಸಿಕ್ವೇರಾ‌ ಕನ್ನಡದ ಶ್ರೇಷ್ಠ ನಟಿ ಲೀಲಾವತಿಯಾದ ಬಗೆ

ಬೆಳ್ತಂಗಡಿ: ಕನ್ನಡ ಚಿತ್ರರಂಗದ ಕಲಾ ಸರಸ್ವತಿ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಟಿ ಲೀಲಾವತಿ ಅವರ ನಿಜ ಹೆಸರು ಲೀನಾ ಸಿಕ್ವೇರಾ‌. ಇವರು ಮೂಲತ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಮುರದಲ್ಲಿ ಜನಿಸಿದ ಲೀಲಾವತಿಯಾಗಿ ಕನ್ನಡ ಸಿನೆಮಾ ಲೋಕದಲ್ಲಿ ಮೇರು ನಟಿಯಾಗಿ ಮಿಂಚಿದವರು.

ಲೀಲಾವತಿಯವರ ಮೂಲ ಹೆಸರು ಲೀನಾ ಸಿಕ್ವೇರಾ. ಅವರ ಸಹೋದರಿ ಅಂಜಲಿನಾ ಸಿಕ್ವೇರಾ. ಬಾಲ್ಯದಲ್ಲೇ ತಂದೆಯನ್ನು ಕಳೆದು ಕೊಂಡ ಅವರನ್ನು ದೊಡ್ಡಪ್ಪನ ಮಗಳಾದ ಲೂಸಿ ಸಿಕ್ವೇರಾ ಸಹೋದರಿ ಲೀನಾ ಮತ್ತು ಅಂಜಲಿನಾ ಅವರನ್ನು ಬೆಳಸಿದ್ದಾರೆ.

ಬಾಲ್ಯದಲ್ಲೇ ಬಹಳಷ್ಟು ಚುರುಕು ಹಾಗೂ ಉತ್ತಮ ನೃತ್ಯ ಪಟುವಾಗಿದ್ದ ಸಹೋದರಿಯರು ಜೀವನೋ ಪಾಯಕ್ಕಾಗಿ ನೃತ್ಯ ತರಬೇತಿ ನೀಡುತ್ತಿದ್ದರು.

ಇವರು ಸರಕಾರಿ ಶಾಲೆಯಲ್ಲೇ ನಾಲ್ಕನೇ ತರಗತಿವರಗೆ ಬಾಲ್ಯದ ವಿದ್ಯಾಭ್ಯಾಸ ಮಾಡಿದರು. ಲಾೖಲದಿಂದ ಕಾಜೂರು ಕೊಲ್ಲಿ ಸಾಗುವ ಹೆದ್ದಾರಿ ಬದಿಯಲ್ಲಿದ್ದ ಮುಳಿಹುಲ್ಲಿನ ಮನೆಯಲ್ಲಿ ಅಕ್ಕ ತಂಗಿ ವಾಸವಿದ್ದರು.

ಇವರ ಸಹೋದರಿ ಅಂಜಲಿನಾ ಸಿಕ್ವೆರಾ ವೃತ್ತಿಯಲ್ಲಿ ಶಿಕ್ಷಕಿ. ಅವರು ಈ ಹಿಂದೆಯೇ ಮೃತಪಟ್ಟಿದ್ದಾರೆ. ಇವರ ದೊಡ್ಡಪ್ಪನ ಮಗಳು (ಸಹೋದರಿ) ಲೂಸಿ ಸಿಕ್ವೇರಾ (93) ವೇಣೂರಿನ ನಿಟ್ಟಡೆ ಗ್ರಾಮದ ಬೆರ್ಕಳದಲ್ಲಿ ವಾಸವಾಗಿದ್ದಾರೆ. ಅವರಿಗೆ 8 ಮಕ್ಕಳು. ಅವರೇ ಲೀಲಾ ವತಿಯನ್ನು ಕೂಡುಕುಟುಂಬವಿದ್ದಾಗ ಬಾಲ್ಯದಲ್ಲಿ ಸಲಹಿದವರು. ಆದರೆ ಲೀಲಾವತಿ ಅವರು ಊರಿಂದ ದೂರವಾದ ಬಳಿಕ ಲೂಸಿ ಯವರು ಮುರದಲ್ಲಿದ್ದ ತಮ್ಮ ಮನೆ ಮಾರಾಟ ಮಾಡಿ ವೇಣೂರಿಗೆ ತೆರಳಿದ್ದಾರೆ.

ಬಾಲ್ಯದಲ್ಲೇ ತಂದೆಯನ್ನು ಕಳೆದಕೊಂಡಿದ್ದ ಲೀಲಾವತಿ ಸಹೋದರಿಯರಿಗೆ ಲೂಸಿ ಸಿಕ್ವೇರಾ ಅವರೇ ಆಸರೆಯಾಗಿದ್ದರು. 25 ವರ್ಷಗಳ ಹಿಂದೆ ಪುತ್ರ ವಿನೋದ್‌ ರಾಜ್‌ ಜತೆಗೆ ಲೀಲಾವತಿ ನಾವೂರಿಗೆ ಬಂದು ಮನೆ ತೆರಿಗೆ ಕಟ್ಟಿ, ಸುತ್ತ ಮುತ್ತ ಮನೆಮಂದಿಯೊಂದಿಗೆ ಸಮಯ ಕಳೆದಿದ್ದರು.

Font Awesome Icons

Leave a Reply

Your email address will not be published. Required fields are marked *