ಬೇಸಿಗೆಯಲ್ಲಿ ಕುಡಿಯಿರಿ ಅಂಜೂರ ಮಿಲ್ಕ್ ಷೇಕ್

ಬೇಸಿಗೆಯಲ್ಲಿ ದೇಹದ ಆರೋಗ್ಯ ಕಾಪಾಡಲು ವಿವಿಧ ಬಗೆಯ ಜ್ಯೂಸ್ ಗಳು ಸಹಕಾರಿಯಾಗಿದ್ದು, ಈ ಪೈಕಿ ಅಂಜೂರ ಮಿಲ್ಕ್ ಷೇಕ್ ಕೂಡ ಒಂದಾಗಿದ್ದು, ಇದನ್ನು ಮನೆಯಲ್ಲಿಯೇ ತಯಾರಿಸಿ ಕುಡಿಯುವುದರಿಂದ ದಾಹ ತಣಿಸಿಕೊಳ್ಳುವುದರೊಂದಿಗೆ ದೇಹಕ್ಕೂ ಪೋಷಕ ಶಕ್ತಿಯನ್ನು ನೀಡಲಿದೆ.

ಬೇಕಾಗುವ ಪದಾರ್ಥಗಳು: ಅಂಜೂರ- ನಾಲ್ಕು, ಹಾಲು- ಎರಡು ಲೋಟ, ಸಕ್ಕರೆ- ನಾಲ್ಕು ಟೀ ಚಮಚೆ, ಗೋಡಂಬಿ ಪುಡಿ – ಎರಡು ಟೀ ಚಮಚೆ, ಬಾದಾಮಿ ಪುಡಿ- ಎರಡು ಟೀ ಚಮಚೆ, ಐಸ್ ಕ್ಯೂಬ್- ಅಗತ್ಯಕ್ಕೆ ತಕ್ಕಂತೆ.

ತಯಾರಿಸುವುದು ಹೇಗೆ: ಅಂಜೂರವನ್ನು ಚೆನ್ನಾಗಿ ತೊಳೆದು ಹಾಲಿನಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಹಾಕಿ. ಆ ನಂತರ ತೆಗೆದು ಅದನ್ನು ಮಿಕ್ಸಿಗೆ ಹಾಕಿ ಹಾಲು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸಿ ಮಾಡಬೇಕು. ಇದಾದ ಬಳಿಕ ಗೋಡಂಬಿ, ಬಾದಾಮಿ ಸೇರಿಸಿ ಮತ್ತೊಮ್ಮೆ ಎರಡು ಸುತ್ತು ಮಿಕ್ಸಿ ಮಾಡಿ ತೆಗೆಯಿರಿ ಆ ನಂತರ ಲೋಟಕ್ಕೆ (ಅಗತ್ಯವಿದ್ದರೆ ಐಸ್ ಕ್ಯೂಬ್) ಹಾಕಿದರೆ ಅಂಜೂರ ಮಿಲ್ಕ್ ಷೇಕ್ ಕುಡಿಯಲು ಸಿದ್ಧವಾದಂತೆಯೇ…

Font Awesome Icons

Leave a Reply

Your email address will not be published. Required fields are marked *