ಬೇಸಿಗೆಯಲ್ಲಿ ಸೌತೆಕಾಯಿ ಇಡ್ಲಿ ಆರೋಗ್ಯಕಾರಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಳಗಿನ ಉಪಹಾರಕ್ಕೆ ಮನೆಗಳಲ್ಲಿ ಇಡ್ಲಿ ಮಾಡುವುದು ಮಾಮೂಲಿ. ಆದರೆ ಅದೇ ಇಡ್ಲಿಯನ್ನು ಬೇರೆ ಬೇರೆ ರೀತಿಯಾಗಿ ಮಾಡಿದರೆ, ಬದಲಾವಣೆ ಇರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಸೌತೆಕಾಯಿಯಿಂದ ಏಕೆ ಇಡ್ಲಿ ತಯಾರಿಸಬಾರದು? ನೀವೇ ತಯಾರಿಸಿ ನೋಡಿ…

ಬೇಕಾಗುವ ಪದಾರ್ಥಗಳು: ಸೌತೆಕಾಯಿ-1(ಚಿಕ್ಕದು), ಅಕ್ಕಿ-2ಬಟ್ಟಲು, ಅವಲಕ್ಕಿ- ಸ್ವಲ್ಪ, ತೆಂಗಿನಕಾಯಿತುರಿ-ಅರ್ಧ ಬಟ್ಟಲು, ರವೆ- ಅರ್ಧ ಬಟ್ಟಲು, ಮೊಸರು- ಅರ್ಧಬಟ್ಟಲು, ಉಪ್ಪು- ರುಚಿಗೆ ತಕ್ಕಷ್ಟು, ಹಸಿಮೆಣಸಿನ ಕಾಯಿ- ಖಾರಕ್ಕೆ ತಕ್ಕಂತೆ

ಮಾಡುವುದು ಹೇಗೆ: ಮೊದಲಿಗೆ ಅಕ್ಕಿಯನ್ನು ಬಾಣಲೆಯಲ್ಲಿ ಸ್ವಲ್ಪ ಹುರಿದು ನೀರಿನಲ್ಲಿ ಸುಮಾರು 2ಗಂಟೆಗಳ ಕಾಲ ನೆನೆಸಿಡಬೇಕು. ಇನ್ನೊಂದೆಡೆ ಸೌತೆಕಾಯಿನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಮತ್ತೊಂದೆಡೆ ರವೆಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಬೇಕು. ಇಷ್ಟು ಮಾಡಿಕೊಂಡ ನಂತರ ಅಕ್ಕಿ, ಸೌತೆಕಾಯಿ, ತೆಂಗಿನ ತುರಿ, ಅವಲಕ್ಕಿ, ಉಪ್ಪು ಎಲ್ಲವನ್ನು ಹಾಕಿ ನೀರು ಹಾಕದೆ ರುಬ್ಬಬೇಕು.

ಹೀಗೆ ರುಬ್ಬುವ ಹಿಟ್ಟು ಸ್ವಲ್ಪ ಮಂದವಾಗಿವಂತೆ ನೋಡಿಕೊಳ್ಳಬೇಕು. ಬಳಿಕ ಅದಕ್ಕೆ ರವೆ ಮತ್ತು ಗಟ್ಟಿಮೊಸರು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಚೂರು ಸೇರಿಸಿ ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿದರೆ ಸೌತೆಕಾಯಿ ಇಡ್ಲಿ ರೆಡಿ ಆದಂತೆಯೇ…

Font Awesome Icons

Leave a Reply

Your email address will not be published. Required fields are marked *