ಬೈಕ್ ಗೆ ಮಿಲಿಟರಿ ತರಬೇತಿ ಲಾರಿ ವಾಹನ ಡಿಕ್ಕಿ; ಮಹಿಳೆ ಸಾವು

ನಂಜನಗೂಡು: ಮಿಲಿಟರಿ ತರಬೇತಿ ಲಾರಿ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಚಿನ್ನದಗುಡಿ ಹುಂಡಿ ಗ್ರಾಮದಲ್ಲಿ ನಡೆದಿದೆ.

ಮಲ್ಲಹಳ್ಳಿ ಗ್ರಾಮದ ಪಾಪಣ್ಣನಾಯಕ ಎಂಬುವವರ ಪತ್ನಿ 35 ವರ್ಷದ ಮಂಗಳಮ್ಮ ಮೃತ ಮಹಿಳೆ. 44 ವರ್ಷದ ಪಾಪಣ್ಣನಾಯಕ, 10 ವರ್ಷದ ತೇಜಸ್, 8 ವರ್ಷದ ಲಕ್ಷ್ಮಿ, ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮದಿಂದ ನಂಜನಗೂಡಿಗೆ ಬೈಕ್ ನಲ್ಲಿ ಪಾಪಣ್ಣನಾಯಕ ಮತ್ತು ಮಂಗಳಮ್ಮ ತಮ್ಮ ಮಗ ತೇಜಸ್‌ನ ಹಾಗೂ ಮಗಳು ಲಕ್ಷ್ಮೀ ಜೊತೆಗೂಡಿ ಬರುತ್ತಿದ್ದ ವೇಳೆ ತಾಲ್ಲೂಕಿನ ಚಿನ್ನದಗುಡಿ ಹುಂಡಿ ಬಳಿ ಮಿಲಿಟರಿ ಯೋಧರ ತರಬೇತಿ ಲಾರಿ ವಾಹನ ಹಿಂಬದಿಯಿಂದ ಗುದ್ದಿದ ಪರಿಣಾಮ ಪಾಪಣ್ಣ ನಾಯಕ ಮತ್ತು ಮಕ್ಕಳು ರಸ್ತೆಯ ಎಡಭಾಗಕ್ಕೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳಮ್ಮ ರಸ್ತೆಯ ಬಲಭಾಗಕ್ಕೆ ಬಿದ್ದಿದಾರೆ. ಇದರಿಂದ ಲಾರಿಯ ಹಿಂಬದಿ ಚಕ್ರ ಅವರ ಹೊಟ್ಟೆ ಮೇಲೆ ಹರಿದು ಅವರು ಸ್ಥಳದಲ್ಲೇ ಮರಣಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಎಎಸ್ಐ ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮಾರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *