ಭಾತಂಬ್ರಾ ಗ್ರಾಮದ ಪ್ರಮುಖರು ಕಾಂಗ್ರೆಸ್‌ಗೆ ಸೇರ್ಪಡೆ

ಬೀದರ್‌:   ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಪ್ರಮುಖರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನಿವಾಸದಲ್ಲಿ ಭಾನುವಾರ ಸಚಿವ ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ಸೇರ್ಪಡೆಗೊಂಡ ಪಿಕೆಪಿಎಸ್ ಅಧ್ಯಕ್ಷ ಸತೀಶ ಬಿರಾದಾರ, ಉಪಾಧ್ಯಕ್ಷ ಚಂದ್ರಕಾಂತ ಕುಟಮಲಗೆ, ಪ್ರೇಮನಾಥ ಗಾಮಾ, ಗುಂಡು ಅಹಮದಾಬಾದೆ, ಮಹಾದೇವ ಅಹಮದಾಬಾದೆ, ಶಿವರಾಜ ಧೂಳೆ, ಮಹಾದೇವ ಕುಟಮಲಗೆ ಸೇರಿದಂತೆ ಇತರ ಪ್ರಮುಖರಿಗೆ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ನಂತರ ಮಾತನಾಡಿದ ಖಂಡ್ರೆ, ‘ಕಳೆದ ಎರಡು ಅವಧಿಯಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಭಗವಂತ ಖೂಬಾ ಅವರು ಜಿಲ್ಲೆಯ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಕೊಡುಗೆ ನೀಡಿಲ್ಲ. ಕಾರ್ಯಕರ್ತರು ಸಂಸದರ ವೈಫಲ್ಯವನ್ನು ಜನರ ಮುಂದಿಟ್ಟು ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸಬೇಕು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯಕುಮಾರ ಗಾಮಾ, ಸದಸ್ಯರಾದ ಜೈರಾಜ ಪಾಟೀಲ, ಶಿವಕುಮಾರ ಕಾಪಸೆ, ರವೀಂದ್ರ ಚಿಡಗುಪ್ಪೆ, ಪ್ರಮುಖರಾದ ಓಂಕಾರ ರಾಮಶೆಟ್ಟೆ, ಭಯ್ಯ, ಸಂಜು ಚಿದ್ರೆ, ಸಂತೋಷ ರೊಡ್ಡೆ, ಮಂತ್ರಿ, ಮುಸ್ತಾಕ್ ಹಾಜರಿದ್ದರು.

Font Awesome Icons

Leave a Reply

Your email address will not be published. Required fields are marked *