ಭಾರತದ ಮೂರನೇ “ಪಾರ್ಕ್ ಸ್ನೋ ಫ್ಯಾಂಟಸಿ” ಈಗ ಮಂಗಳೂರಿನಲ್ಲಿ ಆರಂಭ

ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಸುಡು ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಉರಿಬಿಸಿಲಿನಿಂದಾಗಿ ಅಯ್ಯೋ ನಾವು ಹಿಮಾಲಯದಲ್ಲಾದರೂ ಇರುತ್ತಿದ್ದರೆ ತಂಪಾಗಿರಬಹುದಿತ್ತಲ್ಲವೇ ಎಂಬ ಕನಸು ಕಂಡವರಿದ್ದಾರೆ. ನಿಮ್ಮ ಕನಸು ನನಸಾಗಿದೆ ಅದೂ ಕೂಡಾ ಮಂಗಳೂರಿನಲ್ಲೇ ಹಿಮದ ವಾತಾವರಣ ಆರಂಭವಾಗಿದೆ.

ನಾವು ಹೇಳುತ್ತಿರುವುದು ನಿಜವನ್ನೇ ಈ ಉರಿಬಿಸಿಲಿನಿಂದ ರಿಲ್ಯಾಕ್ಸ್ ಮಾಡಿಕೊಳ್ಳುವುದಕ್ಕಾಗಿ ಹಿಮ ಶಿಖರಗಳ ಮಧ್ಯೆ, ಕಣಿವೆಯೊಳಗೆ ಓಡಾಡುವ ವಿಶೇಷ ಅನುಭವಗಳನ್ನು ಆಸ್ವಾದಿಸಲು ಸುವರ್ಣವಕಾಶ ಒದಗಿ ಬಂದಿದೆ.

Mng (3)

ಹೌದು, ಹಿಮ ವಾತಾವರಣದ ಜೊತೆಯಲ್ಲಿ ಮಂಜಿನ ವಿಶೇಷ ಅನುಭವ ನೀಡುವ ಪ್ರತಿಷ್ಠಿತ ‘ಸ್ನೋ ಫ್ಯಾಂಟಸಿ’ ಮಂಗಳೂರು ನಗರದ ಪಾಂಡೇಶ್ವರದ ಫಿಝ್ಜಾ ಬೈ ನೆಕ್ಸಸ್ ಮಾಲ್‌ನಲ್ಲಿ ಆರಂಭಗೊಂಡಿದೆ. ಸುಡು ಬಿಸಿಲಲ್ಲಿ ತತ್ತರಿಸಿರುವ ಮಂಗಳೂರಿನಲ್ಲಿ ಇದೀಗ ಕೂಲ್ ಕೂಲ್ ಅನುಭವ ಒದಗಿಸುವ ಹಿಮಾಲಯ ನಿರ್ಮಾಣಗೊಂಡಿದೆ. ‘ಸ್ನೋ ಫ್ಯಾಂಟಸಿ’ ಸಂಸ್ಥೆಯು ಕೊಯಂಬತ್ತೂರು, ಕಲ್ಲಿಕೋಟೆಯ ನಂತರ ಮೂರನೇಯ ಪಾರ್ಕ್ ಅನ್ನು ಮಂಗಳೂರಿನಲ್ಲಿ ತೆರೆದಿದೆ. ಮಂಜು ಬೀಳುವ ಅನುಭವ, ಡಿಜೆ, ಕಾಫಿ, ಶಾಪ್, ಪ್ರಾಣಿಗಳ ಚಿತ್ರಗಳನ್ನು ಅಸ್ವಾದಿಸುವ ಹಾಗೆಯೇ ಹಿಮ ಶಿಖರಗಳ, ಕಣಿವೆಯೊಳಗೆ ಓಡಾಡುವ ಅನುಭವ ನೀಡಲಿದೆ.

New Project (3)

ಮ್ಯಾಜಿಕಲ್ ಹಿಮಗಳು, ಹಿಮದ ಗುಡ್ಡೆ ಕಟ್ಟುವ ಆಟಗಳು ಸೇರಿದಂತೆ ಆನೇಕ ವಿಶೇಷತೆಗಳನ್ನು ಅಸ್ವಾದಿಸಬಹುದಾಗಿದೆ. ಮಂಗಳೂರಿನ ಬಿಸಿಲಿನ ವಾತಾವರಣದಲ್ಲಿ ಕುಟುಂಬದ ಎಲ್ಲರೂ ಮನೆ-ಮಂದಿ- ಮಕ್ಕಳೆಲ್ಲಾ ಎಂಜಾಯ್ ಮಾಡಬಹುದು. ಪಾರ್ಕ್‌ಗೆ ಪ್ರವೇಶ ಪಡೆಯುವವರಿಗೆ ಜಾಕೆಟ್, ಸಾಕ್ಸ್, ಬೂಟ್ ಮುಂತಾದವುಗಳನ್ನು ನೀಡುವ ಮೂಲಕ ಆರೋಗ್ಯದ ಕುರಿತು ಕಾಳಜಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಸ್ನೋ ಫ್ಯಾಂಟಸಿ ಪಾರ್ಕ್ ನಲ್ಲಿ ಮಕ್ಕಳಿಗೆ, ಯುವ ಜನತೆಗೆ ಹಲವು ಸಾಹಸ ಕ್ರೀಡೆಗಳನ್ನು ಅಳವಡಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದ ಸೌಂಡ್ ಸಿಸ್ಟಮ್, ಲೇಸರ್ ಶೋ, ಮ್ಯಾಜಿಕಲ್ ಶೋ, ಸ್ನೋಫಾಲ್, ರೋಪ್‌ವಾಕ್ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಏ.4ರಿಂದ ಪಾರ್ಕ್ ಜನರ ಮನರಂಜನೆಗೆ ಆರಂಭವಾಗಲಿದ್ದು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರತಿದಿನ ಕಾರ್ಯನಿರ್ವಹಿಸಲಿದೆ.
V

ನಾವು ಈ ಥರದ ಹಿಮದ ವಾತಾವರಣದ ಅನುಭವ ಪಡೆಯಬೇಕೆಂದರೆ ಹಿಮಾಲಯದ ತಪ್ಪಲಿಗೆ ಭೇಟಿ ನೀಡಬೇಕು ಇಲ್ಲವೇ ಸ್ವಿಟ್ಜರ್ ಲ್ಯಾಂಡ್ ನಂತಹ ದೇಶಗಳಿಗೆ ಭೇಟಿ ನೀಡಬೇಕಾಗುತ್ತದೆ. ಅಷ್ಟೊಂದು ದುಬಾರಿ ವೆಚ್ಚ ಭರಿಸಲು ನಾವು ಶಕ್ತರಾಗಿರದೇ ಇದ್ದರೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶ್ಮೀರ, ಸ್ವಿಟ್ಜರ್ ಲ್ಯಾಂಡ್ ಪ್ರದೇಶದ ಹಿಮದ ವಾತಾವರಣದ ಸ್ವಾದವನ್ನು ಅನುಭವಿಸಲು ಮಂಗಳೂರಿನ ಸ್ನೋ ಫ್ಯಾಂಟಸಿ ಪಾರ್ಕ್ ಗೆ ಭೇಟಿ ನೀಡಬಹುದಾಗಿದೆ.

Font Awesome Icons

Leave a Reply

Your email address will not be published. Required fields are marked *