ಮುಂಬೈ: ಸ್ವಾತಂತ್ರ್ಯ ದಿನದ ಅಂಗವಾಗಿ ಶಾರುಖ್ ಖಾನ್ ದಂಪತಿ ತಮ್ಮ ಕಿರಿಯ ಪುತ್ರ ಅಬ್ರಾಮ್ ಜೊತೆ ಮನ್ನತ್ (ಶಾರುಖ್ ನಿವಾಸ) ನ ಟೆರೇಸ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು.
ನನ್ನ ಕಿರಿಯ ಪುತ್ರ ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಮನೆಯಲ್ಲಿಯೇ ಧ್ವಜಾರೋಹಣ ಮಾಡುವ ಸಂಪ್ರದಾಯ ಆರಂಭಿಸಿದ್ದ, ಈ ವರ್ಷವೂ ನಾವು ಅದನ್ನು ಮುಂದುವರಿಸಿದ್ದೇವೆ.
ನಮ್ಮ ಪ್ರೀತಿಯ ತ್ರಿವರ್ಣ ಧ್ವಜವನ್ನು ಹಾರಿಸುವುದು ಹೆಮ್ಮೆಯ ವಿಷಯ. ಎಲ್ಲರಿಗೂ ಕೂಡ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಭಾರತ ಸಮೃದ್ಧಿಯಾಗಲಿ ಎಂದು ಶಾರುಖ್ ಧ್ವಜಾರೋಹಣದ ಚಿತ್ರ ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಶಾರುಖ್, ಗೌರಿ ಮತ್ತು ಅಬ್ರಾಮ್ ಬಿಳಿ ಬಟ್ಟೆ ಧರಿಸಿ, ರಾಷ್ಟ್ರಧ್ವಜದ ಪಕ್ಕದಲ್ಲಿ ನಿಂತಿದ್ದಾರೆ. ಅವರು ಧ್ವಜಕ್ಕೆ ವಂದನೆ ಸಲ್ಲಿಸುವುದನ್ನು ವೀಡಿಯೊದಲ್ಲಿದೆ. ಆದರೆ ಶಾರುಖ್ ಇನ್ನಿಬ್ಬರು ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.