ಭಾರತ vs ಸೌತ್​ ಆಫ್ರಿಕಾ ನಡುವೆ 2ನೇ ಟೆಸ್ಟ್: 55 ರನ್​ಗೆ ಸೌತ್​ ಆಫ್ರಿಕಾ ಆಲ್​ ಔಟ್

ನ್ಯೂಲ್ಯಾಂಡ್ಸ್: ಕೇಪ್​ಟೌನ್​ನಲ್ಲಿ ಭಾರತ ಮತ್ತು ಸೌತ್​ ಆಫ್ರಿಕಾ ನಡುವೆ 2ನೇ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಸೌತ್​ ಆಫ್ರಿಕಾ 23 ಓವರ್​ಗೆ 51 ರನ್​ ಬಾರಿಸಿ ಆಲ್​ಔಟ್​​ ಆಗುವ ಮೂಲಕ ಮಕಾಡೆ ಮಲಗಿದೆ.

ಬಾಕ್ಸಿಗ್​ ಡೇ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ, ಕೇಪ್​ಟೌನ್​ನಲ್ಲೂ ತನ್ನ ಸಮರ್ಥ ತೋರಿಸಲು ಮುಂದಾಗಿತ್ತು. ಆದರೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್​ ಸಿರಾಜ್​ ತನ್ನ ಬೌಲಿಂಗ್​ ಮೂಲಕ ಪಾಶುಪತಾಸ್ತ್ರ ಪ್ರಯೋಗಿಸಿ 6 ವಿಕೆಟ್​ ಕಬಳಿಸಿದ್ದಾರೆ.

ಟೀಂ ಇಂಡಿಯಾದ ಬೌಲಿಂಗ್​ ದಾಳಿಗೆ ಸೌತ್​ ಆಫ್ರಿಕಾದ ಬ್ಯಾಟ್ಸ್​ಮನ್​ಗಳು ತರಗೆಲೆಯಂತೆ ಉರುಳಿದ್ದಾರೆ. ಜಸ್ಪ್ರಿತ್​ ಬೂಮ್ರಾ 25 ರನ್​ ನೀಡಿ 2 ವಿಕೆಟ್​ ಕಬಳಿಸಿದರೆ, ಮುಖೇಶ್​ ಕುಮಾರ್​ 2 ವಿಕೆಟ್​ ತೆಗೆದುಕೊಂಡಿದ್ದಾರೆ. ಇನ್ನು ಮೊಹಮ್ಮದ್​ ಸಿರಾಜ್​​ 15 ರನ್​ ನೀಡುವ ಮೂಲಕ 6 ವಿಕೆಟ್​ ತನ್ನದಾಗಿಸಿಕೊಂಡಿದ್ದಾರೆ.

ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ 2 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಸೌತ್ ಆಫ್ರಿಕಾ ಜಯ ಸಾಧಿಸಿದೆ. ಇದೀಗ ಸರಣಿಯನ್ನು ಡ್ರಾ ನಲ್ಲಿ ಅಂತ್ಯಗೊಳಿಸಬೇಕಿದ್ದರೆ 2ನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲಲೇಬೇಕು.

Font Awesome Icons

Leave a Reply

Your email address will not be published. Required fields are marked *