ಮಗುವಿಗೆ ತಂದೆ ಯಾರೆಂದು ಪ್ರಶ್ನಿಸಿದ ನೆಟ್ಟಿಗರು

ನಟಿ ಇಲಿಯಾನಾ ಡಿಕ್ರೂಜ್‌ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಫೋಟೋ ಹಾಗೂ ಹೆಸರನ್ನು ಇನ್‌ ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವರ್ಷದ ಏ.18 ರಂದು ನಟಿ ಇಲಿಯಾನಾ ಡಿಕ್ರೂಜ್‌ ಗರ್ಭಿಣಿಯಾಗಿರುವ ಕುರಿತ ವಿಚಾರವನ್ನು ಪೋಸ್ಟ್‌ ಹಾಕುವ ಮೂಲಕ ಹಂಚಿಕೊಂಡಿದ್ದರು. ಮದುವೆಗೂ ಮುನ್ನ ಗರ್ಭಿಣಿ ಆಗಿದ್ದ ನಟಿಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಲವು ಗಾಸಿಪ್‌ ಗಳು ಹಬ್ಬಿತ್ತು.

ಇತ್ತೀಚೆಗೆ ನಟಿ ಡೇಟ್‌ ನೈಟ್‌ ಎನ್ನುವ ಸ್ಟೋರಿಯನ್ನು ಹಾಕಿಕೊಂಡಿದ್ದರು. ನನ್ನ ಕೆಟ್ಟ ಘಳಿಗೆಯಲ್ಲಿ ಬೆಂಬಲವನ್ನು ನೀಡಿದ ಅದ್ಭುತ ವ್ಯಕ್ತಿಯೆಂದು ಅದರಲ್ಲಿ ಬರೆದುಕೊಂಡಿದ್ದರು. ಆದರೆ ಅದು ಅವರ ಪ್ರಿಯಕರ ಎನ್ನುವುದನ್ನು ಅವರು ಎಲ್ಲೂ ರಿವೀಲ್‌ ಮಾಡಿಲ್ಲ.

ಇದೀಗ ಇಲಿಯಾನಾ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಈ ಬಗ್ಗೆ ಅವರು ಶನಿವಾರ ಸೋಶಿಯಲ್‌ ಮೀಡಿಯಾದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಮಗುವಿನ ಫೋಟೋವನ್ನು ರಿವೀಲ್‌ ಮಾಡಿದ್ದಾರೆ. ಮಗುವಿಗೆ ಕೋವಾ ಫೀನಕ್ಸ್ ಡೋಲನ್ ಎಂದು ನಾಮಕರಣ ಮಾಡಿದ್ದು, ಆಗಸ್ಟ್‌ 1 ರಂದು ಮಗು ಜನಿಸಿದೆ ಎಂದು ಫೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

“ನಮ್ಮ ಪ್ರೀತಿಯ ಮಗನನ್ನು ಸ್ವಾಗತಿಸಲು ನಾವು ಎಷ್ಟು ಸಂತೋಷಪಡುತ್ತಿದ್ದೇವೆ ಎನ್ನುವುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ” ಎಂದು ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ. ಆದರೆ ನೆಟ್ಟಿಗರು ಮಗುವಿನ ತಂದೆ ಯಾರೆಂದು ಪ್ರಶ್ನಿಸಿದ್ದಾರೆ. ಇದಕ್ಕೆ ಇಲಿಯಾನಾ ಇನ್ನು ಉತ್ತರಿಸಿಲ್ಲ

Font Awesome Icons

Leave a Reply

Your email address will not be published. Required fields are marked *