ಬೆಂಗಳೂರು: ಕಳೆದೆರಡು ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿಲ್ಲ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ಬಾರಿ ಕಣ್ಣಿಗೆ ಸೋಪಿನ ನೀರು ಹಾಕಿಸಿಕೊಂಡು ಆಸ್ಪತ್ರೆ ಸೇರಿದ್ದರು. ಆದರೆ, ಈ ಬಾರಿ ಅವರಿಗೆ ಆಹಾರದಲ್ಲಿ ವ್ಯತ್ಯಾಸವಾಗಿ ಆಸ್ಪತ್ರೆ ಸೇರಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಫುಡ್ ಪಾಯಿಸನ್ ಆಗಿದೆ ಎಂದು ಕೆಲವು ಮೂಲಗಳು ಮಾಹಿತಿ ನೀಡಿದರೆ, ಇನ್ನೂ ಕೆಲವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳುತ್ತಿದ್ದಾರೆ. . ಹಾಗಾಗಿ ಸಹಜವಾಗಿಯೇ ಡ್ರೋನ್ ಪ್ರತಾಪ್ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಪ್ರತಾಪ್ ಅವರಿಗೆ ಏನಾಗಿದೆ ಎಂದು ತಿಳಿಸಿ ಎಂದು ವಾಹಿನಿಗೆ ಸೋಷಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ದಾರೆ.
ಡ್ರೋನ್ ಪ್ರತಾಪ್ ಅವರ ಟೀಮ್ ಹ್ಯಾಂಡಲ್ ಮಾಡುವಂತಹ ಸೋಷಿಯಲ್ ಮೀಡಿಯಾದಲ್ಲಿ ಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಹುಷಾರು ತಪ್ಪಿದ್ದಾರೆ. ಇನ್ನ ಸ್ವಲ್ಪ ಸಮಯದ ಒಳಗೆ ಬಿಗ್ ಬಾಸ್ ಮನೆಗೆ ನಿಮ್ಮ ಡ್ರೋನ್ ಪ್ರತಾಪ್ ಅವರು ತೆರಳಿದ್ದಾರೆ. ಅವರಿಗೆ ವೋಟ್ ಮಾಡಿ’ ಎಂದು ಪೋಸ್ಟ್ ಮಾಡಿದ್ದಾರೆ.
ಬಿಗ್ ಬಾಸ್ ಮನೆಯ ಅಪ್ ಡೇಟ್ ನೀಡುವಂತಹ ಮತ್ತು ಅದರಲ್ಲಿ ಬಹುತೇಕ ವಿಷಯಗಳು ನಿಜವೂ ಆಗಿರುವಂತಹ ಬಿಬಿಕೆ ಅಪ್ ಡೇಟ್ ಸೋಷಿಯಲ್ ಮೀಡಿಯಾ ಬರೆದುಕೊಂಡಂತೆ ಮತ್ತೆ ಬಿಗ್ ಬಾಸ್ ಮನೆಗೆ ಪ್ರತಾಪ್ ಬರೋದು ಅನುಮಾನ ಎಂದು ಪೋಸ್ಟ್ ಮಾಡಲಾಗಿದೆ. ಪ್ರತಾಪ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದು ಮಾತ್ರ ಖಚಿತಗೊಂಡಿದೆ.