ಮತ್ತೆ ಬಿಗ್‌ ಬಾಸ್‌ ಗೆ ಎಂಟ್ರಿ ಕೊಟ್ಟ ವರ್ತೂರು ಸಂತೋಷ್‌

ಬೆಂಗಳೂರು: ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಜೈಲು ಸೇರಿದ್ದ ವರ್ತೂರು ಸಂತೋಷ್‌ ಮತ್ತೆ ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ್ದಾರೆ. ಎರಡನೇ ವಾರದಲ್ಲಿ ಸ್ಪರ್ಧಿಸುತ್ತಿದ್ದ ಅವರನ್ನು ಅರಣ್ಯಾಧಿಕಾರಿಗಳು ಅರೆಸ್ಟ್​ ಮಾಡಿದ್ದರು.

ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನು ಪಡೆದು ಹೊರಬಂದ ಬೆನ್ನಲ್ಲೇ ವರ್ತೂರು ಸಂತೋಷ್​ ಅವರಿಗೆ ಎರಡನೇ ಚಾನ್ಸ್​ ಸಿಕ್ಕಿದೆ. ಈಗ ಅವರು ಮತ್ತೆ ದೊಡ್ಮನೆ ಒಳಗೆ ಪ್ರವೇಶ ಪಡೆದಿದ್ದಾರೆ. ವರ್ತೂರು ಸಂತೋಷ್​ ಅವರು ಹೊರ ಜಗತ್ತಿನ ಸಂಪರ್ಕಕ್ಕೆ ಬಂದು ಮತ್ತೆ ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದರಿಂದ ಅವರ ಆಟದ ವೈಖರಿ ಬದಲಾಗಲಿದೆ.

ವೀಕ್ಷಕರ ಒಲವು ಯಾವ ಕಡೆ ಇದೆ ಎಂಬುದು ಅವರಿಗೆ ಈಗಾಗಲೇ ಅರ್ಥ ಆಗಿರುತ್ತದೆ. ಅದಕ್ಕೆ ತಕ್ಕಂತೆಯೇ ಅವರು ಆಟ ಮುಂದುವರಿಸುತ್ತಾರೆ.

Font Awesome Icons

Leave a Reply

Your email address will not be published. Required fields are marked *