ಬಾಬರ್ ನಾಯಕತ್ವದಲ್ಲಿ ಪಾಕ್ ತಂಡ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಡುವೆ ಪಾಕ್ ತಂಡದ ನಾಯಕನಾಗಿ ಮತ್ತೆ ಆಯ್ಕೆಯಾಗಿರುವ ಬಾಬರ್ ಆಝಂ ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್ ವೇಳೆ ಪಾಕ್ ತಂಡಕ್ಕೆ ಸಿಕ್ಕ ಆತಿಥ್ಯಕ್ಕೆ ಭಾರತವನ್ನು ಮನಸಾರೆ ಹಾಡಿ ಹೊಗಳಿದ್ದಾರೆ.
ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತವೆ. ಅದರಂತೆ ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ಬಂದಿದ್ದ ಪಾಕ್ ತಂಡಕ್ಕೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಲಾಗಿತ್ತು. ಅಲ್ಲದೆ ಇಡೀ ಭಾರತೀಯ ನಾಗರೀಕರು ಪಾಕ್ ತಂಡವನ್ನು ಆದರದಿಂದ ಸ್ವಾಗತಿಸಿದ್ದರು.
ಹಲವು ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದ ಪಾಕ್ ಕ್ರಿಕೆಟಿಗರು ಹೈದರಾಬಾದ್ ಬಿರಿಯಾನಿಗೆ ಫಿದಾ ಆಗಿದ್ದರು. ಪಾಕ್ ಆಟಗಾರರು ಇರುವಷ್ಟು ದಿನ ಅವರಿಗೆ ಯಾವುದೇ ಕೊರತೆಯಾಗದಂತೆ ಬಿಸಿಸಿಐ ನೋಡಿಕೊಂಡಿತ್ತು. ಇದೀಗ ಅದನ್ನು ನೆನೆಸಿಕೊಂಡಿರುವ ಬಾಬರ್ ಭಾರತವನ್ನು ಹೊಗಳಿದ್ದಾರೆ.
‘2023 ರ ವಿಶ್ವಕಪ್‌ಗೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮತ್ತು ಭಾರತದಾದ್ಯಂತ ನಮಗೆ ದೊರೆತ ಸ್ವಾಗತ ಅದ್ಭುತವಾಗಿತ್ತು. ಅದೊಂದು ವಿಭಿನ್ನ ಅನುಭವ. ಇದು ಅವರ ಪ್ರೀತಿಯಾಗಿತ್ತು, ಭಾರತೀಯ ಜನರು ನಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು, ಅವರು ನಮ್ಮ ಕ್ರಿಕೆಟ್ ಅನ್ನು ಮೆಚ್ಚಿದರು ಎಂದಿದ್ದಾರೆ.