ಮತ್ತೆ ಸಂಕಷ್ಟಕ್ಕೆ ಸಿಲುಕಿದ್ರ ಸನ್ನಿ ಡಿಯೋಲ್‌: ಏನಿದು ವಿವಾದ

ಚೆನ್ನೈ: ನಟ ಸನ್ನಿ ಡಿಯೋಲ್‌ ಸಂಕಷ್ಟವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಸುಮಾರು 56 ಕೋಟಿ ರೂಪಾಯಿ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ಮರುಪಾವತಿಸಲು ವಿಫಲವಾದ ಕಾರಣ ಬ್ಯಾಂಕ್ ಆಫ್ ಬರೋಡಾ (ಬಿಒಬಿ) ನಟ ಸನ್ನಿ ಡಿಯೋಲ್ ಅವರ ಮುಂಬೈ ಆಸ್ತಿಯನ್ನು ಇ-ಹರಾಜಿನಲ್ಲಿ ಇರಿಸಿದೆ. ಈ ಬಗ್ಗೆ ಬ್ಯಾಂಕ್ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ.

ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿಯೂ ಜಾಹೀರಾತು ಪ್ರಕಟಗೊಂಡಿದ್ದು, ಅದರಲ್ಲಿ ಹೀಗೆ ವಿವರವಿದೆ. ಬಿಒಬಿ ಸಾಲಗಾರ ಅಜಯ್ ಸಿಂಗ್ ಡಿಯೋಲ್ ಅಲಿಯಾಸ್ ಸನ್ನಿ ಡಿಯೋಲ್ ಅವರು ಆಸ್ತಿ ಮೇಲೆ ಸಾಲ ಪಡೆದಿದ್ದು, ಇದುವರೆಗೂ ಮರುಪಾವತಿ ಮಾಡಿಲ್ಲ. 2022ರ ಡಿಸೆಂಬರ್‌ 26ರರಿಂದ ಇದುವರೆಗೆ ಸುಮಾರು 55.99 ಕೋಟಿ ರೂಪಾಯಿಗಳನ್ನು ಬಡ್ಡಿ ಮತ್ತು ಅಸಲನ್ನು ನೀಡಬೇಕಿದೆ ಎಂದು ಹೇಳಿದೆ.

ಬ್ಯಾಂಕ್ ಪ್ರಕಾರ, ಇ-ಹರಾಜಿನಲ್ಲಿ ಇರಿಸಲಾದ ಆಸ್ತಿಯು ಮುಂಬೈನ ಜುಹು ಪ್ರದೇಶದಲ್ಲಿದ್ದು 599.44 ಚದರ ಮೀಟರ್‌ ನ ವಿಲ್ಲಾ ಎಂದು ನಮೂದಾಗಿದೆ. ಬ್ಯಾಂಕ್ ಆಸ್ತಿಯನ್ನು ಸೆಕ್ಯುರಿಟೈಸೇಶನ್ ಮತ್ತು ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್‌ಫೋರ್ಸ್‌ಮೆಂಟ್ ಆಫ್ ಸೆಕ್ಯುರಿಟಿ ಇಂಟ್ರೆಸ್ಟ್ ಆಕ್ಟ್, 2022 ರ ಅಡಿಯಲ್ಲಿ ಹರಾಜು ಮಾಡುತ್ತಿದೆ.

Font Awesome Icons

Leave a Reply

Your email address will not be published. Required fields are marked *