ಮುಂಬೈ: ನಟಿ ರಶ್ಮಿಕಾ ಮಂದಣ್ಣ ಈಗ ಫುಲ್ ಬ್ಯುಸಿಯಾಗಿದ್ದಾರೆ. ಮೊದಲು ಕನ್ನಡದಲ್ಲಿ ನಟಿಸಿದ್ದ ರಶ್ಮಿಕಾ ನಂತರ ತೆಲುಗು ಇಂಡಸ್ಟ್ರಿಗೆ ಹಾರಿದರು. ಇದೀಗ ಇದೀಗ ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಅವರ ಲಿಪ್ ಟು ಲಿಪ್ ಕಿಸ್ಸಿಂಗ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಭಾರಿ ಸುದ್ದಿಯಾಗಿದ್ದ ರಶ್ಮಿಕಾ ಮಂದಣ್ಣ ಈಗಿನ ಅವಾತಾರದಿಂದ ಲಿಟ್ಲ್ ಬಿಟ್ ಕನ್ ಫ್ಯೂಸ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಕಿಸ್ಸಿಂಗ್ ಸೀನ್ಗಳು ಹೊಸದೇನೂ ಅಲ್ಲ. ಈ ಮೊದಲು ಅವರು ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಜೊತೆ ಚುಂಬನದ ದೃಶ್ಯಗಳಲ್ಲಿ ನಟಿಸಿದ್ದರು. ಈಗ ರಣಬೀರ್ ಕಪೂರ್ ಜೊತೆ ‘ಅನಿಮಲ್’ ಸಿನಿಮಾಗಾಗಿ ಲಿಪ್ ಕಿಸ್ ಮಾಡಿದ್ದಾರೆ. ಅಕ್ಟೋಬರ್ 11ರಂದು ಈ ಸಿನಿಮಾದ ಹಾಡು ಬಿಡುಗಡೆ ಆಗಲಿದೆ. ಇದೇ ಹಾಡಿನಲ್ಲಿ ಲಿಪ್ ಲಾಕ್ ದೃಶ್ಯ ಇರಲಿದೆ.
Hua main ❤️
Out tomorrow..
this song is 🔥🔥🔥🔥
And I personally love it in all the versions.. Hindi Kannada telugu tamil and Malayalam .. 💃🏻🥳#HuaMain #Ammayi #Neevaadi #OhBhaale #Pennaale#AnimalTheFilm@AnimalTheFilm @AnilKapoor #RanbirKapoor @thedeol @tripti_dimri23… pic.twitter.com/JH7eADNoDs— Rashmika Mandanna (@iamRashmika) October 10, 2023