‘ಮತ್ತೊಮ್ಮೆ ಮೋದಿ ಸರ್ಕಾರ’ ಅಭಿಯಾನಕ್ಕೆ ಚಾಲನೆ

ಬೀದರ್: ರಾಜ್ಯದಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ‘ಮತ್ತೊಮ್ಮೆ ಮೋದಿ ಸರ್ಕಾರ’ ಅಭಿಯಾನಕ್ಕೆ ಜಿಲ್ಲೆಯಲ್ಲಿ (ಜ.16)ರ  ಮಂಗಳವಾರದಂದು ಚಾಲನೆ ನೀಡಲಾಯಿತು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ತಾಲ್ಲೂಕಿನ ಚಿಟ್ಟಾ ವಾಡಿ ಗ್ರಾಮದಲ್ಲಿ ಗೋಡೆ ಮೇಲೆ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂದು ಬರೆದು ಅಭಿಯಾನಕ್ಕೆ ಚಾಲನೆ ನೀಡಿದರು.

2024ರಲ್ಲಿ ಪುನಃ ಮೋದಿಯವರು ದೇಶದಲ್ಲಿ ಸರ್ಕಾರ ರಚಿಸಬೇಕು. ಭಾರತಕ್ಕೆ ಸ್ಥಿರ ಸರ್ಕಾರದ ಅಗತ್ಯವಿದೆ. ಪ್ರತಿ ಬೂತ್‌ನಲ್ಲಿ ಐದು ಕಡೆ ಗೋಡೆ ಬರಹ ಬರೆಯಬೇಕು. ಇದು ಮೋದಿಯವರ ಅಪೇಕ್ಷೆಯಾಗಿದೆ. ಕಾರ್ಯಕರ್ತರು ಅದರಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಬೆಲ್ದಾಳೆ ಹೇಳಿದರು.

‘ರಾಷ್ಟ್ರಮಟ್ಟದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗೋಡೆ ಬರಹ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಭಾರತ ವಿಕಾಸ ಹೊಂದುತ್ತಿದೆ. ಕೇಂದ್ರದ ಅನೇಕ ಯೋಜನೆಗಳು ಜನಸಾಮಾನ್ಯರಿಗೆ ತಲುಪಿವೆ. ಆದಕಾರಣ ಪುನಃ ಮೋದಿ ದೇಶದ ಪ್ರಧಾನಿ ಹುದ್ದೆಗೇರಬೇಕು’ ಎಂದರು.

Font Awesome Icons

Leave a Reply

Your email address will not be published. Required fields are marked *