ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ದೂರು ದಾಖಲು

ಮೈಸೂರು: ಹೋಟೆಲ್ ಮ್ಯಾನೇಜ್ ಮೆಂಟ್ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ  ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ  ಅತ್ಯಾಚಾರ ಮಾಡಿರುವ ಘಟನೆ ನಗರದ ಹೋಟೆಲ್ ವೊಂದರಲ್ಲಿ ನಡೆದಿದೆ.

ಮೈಸೂರು- ಬೆಂಗಳೂರು ರಸ್ತೆಯ ರಿಂಗ್ ರೋಡ್ ಬಳಿ ಇರುವ ಏಟ್ರಿಯಂ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್ ಮ್ಯಾನೇಜ್ಮೆಂಟ್ ನಡೆಸುವ ಪ್ರೀತಂ ಪುರಾಣಿಕ್ ಎಂಬಾತನೇ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿ.  ಯುವತಿ ನೀಡಿದ ದೂರಿನ ಮೇರೆಗೆ ಪ್ರೀತಂ ಪುರಾಣಿಕ್ ಹಾಗೂ ಆತನ ತಂದೆ ಕೃಷ್ಣದಾಸ್ ಪುರಾಣಿಕ್ ಎಂಬುವರ ಮೇಲೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.

ಕೆಲವು ವರ್ಷಗಳಿಂದ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಸಲುಗೆ ಬೆಳೆಸಿದ ಪ್ರೀತಂ ಪುರಾಣಿಕ್ ಮದುವೆ  ಆಗುವುದಾಗಿ ನಂಬಿಸಿ ಬಲೆಗೆ ಬೀಳಿಸಿಕೊಂಡಿದ್ದ. ಹೋಟೆಲ್‌ನಲ್ಲೇ ಇದ್ದ ಸ್ಪಾ ಒಂದರಲ್ಲಿ ಮದುವೆ ಆದ ಪ್ರೀತಂ ಪುರಾಣಿಕ್ ಯುವತಿಯ ಇಚ್ಛೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ. ಇದರ ಫಲವಾಗಿ ಆಕೆ ಗರ್ಭವತಿಯಾಗಿದ್ದಳು. ಮದುವೆ ಆಗುವಂತೆ ಒತ್ತಾಯಿಸಿದಾಗ ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದನಂತೆ.

ಇದಾಗ  ಬಳಿಕ ಮತ್ತೆ ಮದುವೆ ಆಗುವ ನಾಟಕವಾಡಿ ಆಕೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ದೈಹಿಕ ಸಂಪರ್ಕ ಬೆಳೆಸಿದ. ಈ ವೇಳೆ ಆಕೆ ಮತ್ತೆ ಗರ್ಭವತಿಯಾಗಿದ್ದಾಳೆ. ಇದೀಗ ಮದುವೆ ಆಗುವಂತೆ ಒತ್ತಾಯಿಸಿದರೆ ಪ್ರೀತಂ ಪುರಾಣಿಕ್ ಹಾಗೂ ತಂದೆ ಕೃಷ್ಣದಾಸ್ ಪುರಾಣಿಕ್ ಯುವತಿಗೆ ಜಾತಿ ನಿಂದನೆ ಮಾಡಿ ಹೋಟೆಲ್‌ನಿಂದ ಹೊರಗೆ ತಳ್ಳಿದ್ದಾರೆ.

ಸಧ್ಯ ಗರ್ಭವತಿಯಾಗಿರುವ ಯುವತಿ, ತನ್ನನ್ನು ವಂಚಿಸಿದ ಪ್ರೀತಂ ಪುರಾಣಿಕ್ ಹಾಗೂ ಬೆಂಬಲ ನೀಡಿದ ತಂದೆ ಕೃಷ್ಣದಾಸ್ ಪುರಾಣಿಕ್ ವಿರುದ್ದ ಕಾನೂನು ಕ್ರಮ  ಕೈಗೊಳ್ಳುವಂತೆ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ  ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *