ಮದುವೆ ಮನೆಗೆ ಒಂಟೆಯ ಮೇಲೆ ಎಂಟ್ರಿ ಕೊಟ್ಟ ವರ: ವಿಡಿಯೋ ವೈರಲ್‌

ಕೇರಳ: ಮದುವೆಗೆಂದು ವರನನ್ನು ಒಂಟೆ ಮೇಲೆ ಕರೆತಂದ ಘಟನೆ ಕೇರಳದಲ್ಲಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವರ ಸೇರಿ 26 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ, ವರ ಕುದುರೆ ಅಥವಾ ವಾಹನಬಿಟ್ಟು ಒಂಟೆಯ ಮೇಲೆ ಬಂದಿದ್ದು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ವಲಪಟ್ಟಣ ಮೂಲದ ವರಣ್ ರಿಜ್ವಾನ್ ಹಾಗೂ ಆತನೊಂದಿಗೆ ಬಂದಿದ್ದ 25 ಮಂದಿ ವಿರುದ್ಧ ಚಾಕರಕಲ್ಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ಮದುವೆಯ ದೃಶ್ಯಾವಳಿಗಳು ಸದ್ಯ  ವೈರಲ್ ಆಗಿವೆ.

ಅತಿಯಾದ ಸಂಭ್ರಮಾಚರಣೆಯಿಂದಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯನ್ನೂ ಬಂದ್ ಮಾಡಲಾಗಿತ್ತು. ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಮತ್ತು ಆಂಬ್ಯುಲೆನ್ಸ್ ಸೇರಿದಂತೆ ಹಲವು ವಾಹನಗಳು ಸಿಲುಕಿಕೊಂಡಿದ್ದವು. ಹೀಗಾಗಿ ರಸ್ತೆ ತಡೆ ನಿರ್ಮಿಸಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಬಲಪ್ರಯೋಗ ಮಾಡಿದರು.

 

Font Awesome Icons

Leave a Reply

Your email address will not be published. Required fields are marked *