ಮದ್ಯ ಮಾರಾಟಕ್ಕೆ 6ವರ್ಷದ ಮಗು ಬಳಕೆ: ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿ ದೂರು. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್
ಮೈಸೂರು,ಡಿಸೆಂಬರ್,27,2023(www.justkannada.in):  ಮೈಸೂರು ತಾಲ್ಲೂಕು ವರುಣ ಹೋಬಳಿ ಸರ್ಕಾರಿ ಉತ್ತನಹಳ್ಳಿಯ ಅಂಬೇಡ್ಕರ್ ಬೀದಿಯಲ್ಲಿ 6 ವರ್ಷದ ಮಗು ಮದ್ಯ ಮಾರಾಟದಲ್ಲಿ ತೊಡಗಿದ್ದು ಇದಕ್ಕೆ ಸಹಕರಿಸುತ್ತಿರುವ, ಗ್ರಾಮದ ಕೆಲವು ಯಜಮಾನರು ಮುಖಂಡರ ಸಹಿತ ಸದರಿ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿ  ಮೈಸೂರು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ , ಸಹಾಯಕ ಕಾರ್ಮಿಕ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ ಮತ್ತು ಪತ್ರಕರ್ತ ರವೀಂದ್ರ ಎಂ. ಅವರು ದೂರು ಸಲ್ಲಿಸಿದ್ದಾರೆ.

ಈ ಕುರಿತು ದೂರು ಸಲ್ಲಿಸಿರುವ ಎಂ.ರವೀಂದ್ರ, ಉತ್ತನಹಳ್ಳಿಯ ನಿವಾಸಿಯಾದ ನಾನು ಮೈಸೂರು ತಾಲೂಕಿನ ಎಸ್ ಉತ್ತನಹಳ್ಳಿ ಗ್ರಾಮದ ಮನೆಯಲ್ಲಿ, ಬಾಲಕಾರ್ಮಿಕನು ಮದ್ಯ ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದ ಎಂಬುದಕ್ಕೆ ಸಂಬಂಧಿಸಿದಂತೆ ವಿಡಿಯೋ ಚಿತ್ರೀಕರಣ ಮಾಡಿ ಮಕ್ಕಳ ಸಹಾಯವಾಣಿ 1098 ಇಲ್ಲಿಗೆ ಕರೆ ಮಾಡಿ ತಿಳಿಸಿರುತ್ತೇನೆ. ಸದರಿಯವರ ನಿರ್ದೇಶನದಂತೆ ಮೈಸೂರಿನ DCPU ರವರಿಗೆ ಸಹ ಈ ಬಗ್ಗೆ ತಿಳಿಸಿ, ಅವರ ಸೂಚನೆ ಮೇರೆಗೆ ಮೊಬೈಲ್ ಸಂಖ್ಯೆ 8951069897 ಇಲ್ಲಿಗೆ ಹಾಗೂ DCPU ರವರ 9972505030 ಮೊಬೈಲಿಗೆ ವಾಟ್ಸಪ್ ಮೂಲಕ ನನ್ನ ಮೊಬೈಲ್ 9449886677 ಸಂಖ್ಯೆ ಇಂದ ವಿಡಿಯೋ ರವಾನಿಸಿರುತ್ತೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಕಚೇರಿಯಲ್ಲಿ ಪತ್ರ ಸಂಖ್ಯೆ: ಸಕಾಆಮೈ/ಬಾಕಾಯೋ/2022-23 ದಿನಾಂಕ 22/12/2022 ಇಲ್ಲಿನ ಪತ್ರದಲ್ಲಿರುವಂತೆ ಕಡತ ನಿರ್ವಹಣೆಯಾಗಿರುವುದು ಸರಿ ಅಷ್ಟೇ.

ಈ ಬಗ್ಗೆ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮಾಡಿದ್ದಕ್ಕೆ ನನ್ನನ್ನು ಸಾರ್ವಜನಿಕವಾಗಿ ಅವಮಾನಿಸಿದ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾನು ನೀಡಿದ ದೂರಿಗೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ 172/2022 ದಾಖಲಾಗಿರುತ್ತದೆ. ಆದರೆ ಸದರಿ ಮಗುವಿನ ಬಗ್ಗೆ ಮಾಹಿತಿ ನೀಡಬಾರದೆಂದು ನಮ್ಮ ಗ್ರಾಮದ ಯಜಮಾನರು ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಲು ನಿರಾಕರಿಸುತ್ತಾರೆ.

ಈ ಎಲ್ಲವನ್ನು ಗಮನಿಸಿದರೆ ಈ ರೀತಿ ಮಗುವಿನ ಕೈಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೂ ನಮ್ಮ ಗ್ರಾಮದ ಯಜಮಾನರಿಗೂ ನಿಕಟ ಸಂಬಂಧವಿರುವ ಅನುಮಾನವಿರುತ್ತದೆ. ಈ ಮಗು ಚಿಕ್ಕ ವಯಸ್ಸಿನಲ್ಲಿ ಈ ರೀತಿಯಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡರೆ ನಾವು ಹೇಗೆ ತಾನೇ ಸತ್ಪ್ರಜೆಗಳನ್ನು ನಿರ್ಮಿಸಲು ಸಾಧ್ಯ? ಮತ್ತು ಈ ರೀತಿಯಾಗಿ ಮಗು ಮದ್ಯ ಮಾರಾಟದಲ್ಲಿ ತೊಡಗಿಕೊಂಡಿರುವ ಬಗ್ಗೆ, ಮಾಹಿತಿ ನೀಡದಿರುವುದು ಸಹ ಕ್ರಿಮಿನಲ್ ಅಪರಾಧವೇ ಆಗಿರುವುದರಿಂದ ದಯಮಾಡಿ ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲಿಸುವ ಮೂಲಕ ಕ್ರಮ ಕೈಗೊಂಡು, ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡದ ಹಿರಿಯ ಕಾರ್ಮಿಕ ನಿರೀಕ್ಷಕರು 2ನೇ ವೃತ್ತ ಮೈಸೂರು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮವಹಿಸಬೇಕೆಂದು ದೂರಿನಲ್ಲಿ ರವೀಂದ್ರ . ಎಂ ಮನವಿ ಮಾಡಿದ್ದಾರೆ.

Key words: Use- 6-year-old -child -sell -liquor- Complaint – registration – criminal case.


Previous article5, 8 ಮತ್ತು 9ನೇ ತರಗತಿ ಮೌಲ್ಯಾಂಕನ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.


Font Awesome Icons

Leave a Reply

Your email address will not be published. Required fields are marked *