ಮನೆಯಲ್ಲಿದ್ದ 17 ಲಕ್ಷ ಮೌಲ್ಯದ ಚಿನ್ನ ಕದ್ದು ಪರಾರಿಯಾದ ಕಳ್ಳರು

ಹಾವೇರಿ: ನಗರದ ವಿದ್ಯಾನಗರ ಪಶ್ಚಿಮ ಬಡಾವಣೆ, ಎಲ್.ಐ.ಸಿ ಹಿಂಭಾಗದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಅಂತ್ಯಕ್ರಿಯೆಗೆಂದು ಹೋಗಿದ್ದ ವೃದ್ಧೆಯ ಮನೆಯ ಚಿನ್ನಾಭರಣಗಳನ್ನು ಕಳ್ಳರು ದೋಚಿ ಪರಾರಿಯಾರಿದ್ದಾರೆ.

ಕಳ್ಳರು, ಸವಿತಾ ಸವಡಿ ಎಂಬುವವರ ಮನೆಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿ ಮನೆಗೆ ಹಾಕಿದ ಇಂಟರ್ ಲಾಕ್ ಅನ್ನ ತೆಗೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ನಂತರ ಮನೆಯ ಬೆಡ್ ರೂಮಿನಲ್ಲಿದ್ದ 38 ತೊಲೆ ಬಂಗಾರ ಕದ್ದಿದ್ದಾರೆ. ನಕಲಿ ಕೀ ಬಳಸಿ ಸುಮಾರು 17 ಲಕ್ಷದ 10 ಸಾವಿರ ರೂಪಾಯಿ ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಹಾವೇರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *