ಮನೆಯ ಟೆರೆಸ್ ನಿಂದ ಬಿದ್ದು ಆಟೋ ಚಾಲಕ ಸಾವು

ಕಾಸರಗೋಡು: ನಿರ್ಮಾಣ ಹಂತದಲ್ಲಿರುವ ಮನೆಯ ಟೆರೆಸ್ ನಿಂದ ಬಿದ್ದು ಆಟೋ ಚಾಲಕರೋರ್ವರು ಮೃತಪಟ್ಟ ಘಟನೆ ಬಂದ್ಯೋಡ್ ಸಮೀಪದ ಕುಬಣೂರಿನಲ್ಲಿ ನಡೆದಿದೆ. ಕುಬಣೂರಿನ ಪದ್ಮನಾಭ (45)ಮೃತಪಟ್ಟವರು.

ಬಂದ್ಯೋಡ್ ಆಟೋ ಸ್ಟ್ಯಾಂಡ್ ನಲ್ಲಿ ಆಟೋರಿಕ್ಷಾ ಚಾಲಕರಾಗಿದ್ದರು. ಗುರುವಾರ ಸಂಜೆ ಮನೆ ಸಮೀಪದ ಸ್ನೇಹಿತರೋರ್ವರ ಮನೆಯ ಟೆರೆಸ್ ಗೆ ಹತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಪದ್ಮನಾಭರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮಧ್ಯಾಹ್ನ ಮೃತಪಟ್ಟರು. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *