ಮರ್ಸನರಿ ಸ್ಪೈವೇರ್ ದಾಳಿ :ಐಫೋನ್‌ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ ಆ್ಯಪಲ್

ನವದೆಹಲಿ : ಭಾರತ ಸೇರಿದಂತೆ 92 ದೇಶಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿದೆ. ಪೆಗಾಸಸ್ ಎಂಬ ಸ್ಪೈವೇರ್ ದಾಳಿ ಪ್ರಕರಣ ಇತ್ತೀಚೆಗೆ ಜಗತ್ತಿನಾದ್ಯಂತ ಸದ್ದು ಮಾಡಿದೆ. ಭಾರತದಲ್ಲೂ ಹಲವು ಐಫೋನ್ ಬಳಕೆದಾರರಿಗೆ ಸರ್ಕಾರಿ ಪ್ರಾಯೋಜಿತ ಸ್ಪೈವೇರ್ ದಾಳಿಯಾಗಿರುವ ಸಾಧ್ಯತೆ ಬಗ್ಗೆ ನೋಟಿಫಿಕೇಶನ್ ಬಂದಿತ್ತು. ಆದರೆ ಸರ್ಕಾರ ಇದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದೆ ನಿರಾಕರಿಸಿತ್ತು. ಇತ್ತ ಆ್ಯಪಲ್ ಸಂಸ್ಥೆ ಕೂಡ ಈ ಅಲರ್ಟ್​ನಲ್ಲಿರುವ ಅಂಶವನ್ನು ಖಚಿತಪಡಿಸಲು ವಿಫಲವಾಗಿತ್ತು. ಆದರೆ ಈಗ ಎಚ್ಚೆತ್ತು ಕೊಂಡು ಸಂದೇಶವನ್ನು ರವಾನಿಸಿದೆ.

ಯಾರ ಐಫೋನ್ ಮತ್ತಿತರ ಆ್ಯಪಲ್ ಉತ್ಪನ್ನಗಳ ಮೇಲೆ ಸ್ಪೈವೇರ್ ದಾಳಿ ಆಗಿರುವ ಸಾಧ್ಯತೆ ಇದೆಯೋ ಆ ವ್ಯಕ್ತಿಗಳ ಇಮೇಲ್ ಮತ್ತು ಮೊಬೈಲ್ ನಂಬರ್​ಗೆ ಆ್ಯಪಲ್ ಅಲರ್ಟ್ ಮೆಸೇಜ್ ಕಳುಹಿಸಿದೆ. ಆ್ಯಪಲ್ ತನ್ನ ಸಪೋರ್ಟ್ ಪೇಜ್​ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಈ ಸ್ಪೈವೇರ್ ದಾಳಿಯನ್ನು ಮರ್ಸನರಿ ಸ್ಪೈವೇರ್ ಅಟ್ಯಾಕ್ ಎಂದು ಬಣ್ಣಿಸಿದೆ. ಇದು ಮಾಮೂಲಿಯ ಸೈಬರ್ ಕ್ರಿಮಿನಲ್ ಕೃತ್ಯ ಮತ್ತು ಕನ್ಸೂಮರ್ ಮಾಲ್ವೇರ್​ಗಿಂತಲೂ ಬಹಳ ಸಂಕೀರ್ಣವಾಗಿದೆ. ಬಹುತೇಕ ಐಫೋನ್ ಬಳಕೆದಾರರಿಗೆ ಯಾವ ತೊಂದರೆ ಇರುವುದಿಲ್ಲ. ಕೆಲವೇ ಆಯ್ದ ಮಂದಿಗೆ ಮಾತ್ರ ಸ್ಪೈವೇರ್ ದಾಳಿಯ ಅಪಾಯ ಇದೆ ಎಂದು ಗೂಗಲ್ ಸಪೋರ್ಟ್ ಪೇಜ್​ನಲ್ಲಿ ತಿಳಿಸಲಾಗಿದೆ.

ಆ್ಯಪಲ್ ಕಳುಹಿಸಿದ ಈ ಅಲರ್ಟ್ ಮೆಸೇಜ್​ನಲ್ಲಿ ಬಹಳ ಗಮನಾರ್ಹ ಸಂಗತಿ ಎಂದರೆ ಮರ್ಸನರಿ ಸ್ಪೈವೇರ್ ದಾಳಿಯ ಹಿಂದೆ ಸರ್ಕಾರ ಅಥವಾ ಸರ್ಕಾರದ ಪರವಾಗಿ ಕೆಲಸ ಮಾಡುವ ಸಂಸ್ಥೆಗಳ ಪಾತ್ರ ಇರುವುದನ್ನು ತೋರಿಸಿದೆ. ಇಸ್ರೇಲೀ ಕಂಪನಿ ಪೆಗಾಸಸ್ ಅನ್ನು ಇದು ಉದಾಹರಣೆಯಾಗಿ ನೀಡಿದೆ. ಪತ್ರಕರ್ತರು, ಆಕ್ಟಿವಿಸ್ಟ್​​ಗಳು, ರಾಜಕಾರಣಿಗಳು, ರಾಜತಾಂತ್ರಿಕರನ್ನು ಹೆಚ್ಚಾಗಿ ಗುರಿ ಮಾಡಲಾಗುತ್ತದೆ

ದಾಳಿಗೆ ಒಳಗಾದವರು ಏನು ಮಾಡಬೇಕು?
ಒಂದು ವೇಳೆ ಐಫೋನ್ ಮೇಲೆ ಸ್ಪೈವೇರ್ ದಾಳಿಯಾಗಿದ್ದರೆ ಅದರ ಬಳಕೆದಾರರು ತಮ್ಮ ಐಫೋನ್​ನಲ್ಲಿ ಕೂಡಲೇ ಲಾಕ್​ಡೌನ್ ಮೋಡ್ ಎನೇಬಲ್ ಮಾಡಬೇಕು. ಐಒಎಸ್​ನ ಇತ್ತೀಚಿನ ಆವೃತ್ತಿಗೆ ಅಪ್​ಡೇಟ್ ಮಾಡಬೇಕು. ಅವರು ಬಳಸುವ ಎಲ್ಲಾ ಇತರ ಆ್ಯಪಲ್ ಸಾಧನವನ್ನೂ ಅಪ್​ಡೇಟ್ ಮಾಡಬೇಕು ಎಂದು ಆ್ಯಪಲ್ ಸಲಹೆ ನೀಡಿದೆ.

Font Awesome Icons

Leave a Reply

Your email address will not be published. Required fields are marked *