ಮಲ್ಪೆ: ಸ್ಕೂಟರ್ ಸಮೇತ ಬಂದರಿನ ನೀರಿಗೆ ಬಿದ್ದು ಮೀನುಗಾರ ಸಾವು

ಮಲ್ಪೆ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಆಕಸ್ಮಿಕವಾಗಿ ಮೀನುಗಾರನೋರ್ವ ಸ್ಕೂಟರ್ ಸಮೇತ ದಕ್ಕೆ ನೀರಿಗೆ ಬಿದ್ದ ಘಟನೆ ನಡೆದಿದೆ.

ನೀರಿಗೆ ಬಿದ್ದ ವ್ಯಕ್ತಿ ಮುಳುಗಡೆಗೊಂಡು ಕಣ್ಮರೆಯಾಗಿದ್ದರು.ಇವರು ತಮಿಳುನಾಡು ಮೂಲದ ಮೀನುಗಾರನಾಗಿದ್ದು, ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು.

ನೀರಿಗೆ ಬಿದ್ದ ಮಾಹಿತಿ ತಿಳಿದು ತತ್‌ಕ್ಷಣ ಈಶ್ವ‌ರ್ ಮಲ್ಪೆ ಅವರು ಧಾವಿಸಿ ಬಂದು ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಕ್ಕಿರಲಿಲ್ಲ. ಆದರೆ ಆತನ ಸ್ಕೂಟರ್ ಪತ್ತೆಯಾಗಿದ್ದು ಹಗ್ಗದ ಸಹಾಯದಿಂದ ಮೇಲಕ್ಕೆತ್ತಲಾಯಿತು. ಇಂದು ಮೀನುಗಾರನ ಮೃತದೇಹ ಪತ್ತೆಯಾಗಿದ್ದು ಶವವನ್ನು ಮೇಲಕ್ಕೆತ್ತಲಾಯಿತು. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Font Awesome Icons

Leave a Reply

Your email address will not be published. Required fields are marked *