ಮಾಜಿ ಐಎಎಸ್ ಅಧಿಕಾರಿ ದಿ. ಕೆ. ಶಿವರಾಮ್ ಪತ್ನಿ ಇಂದು ಕಾಂಗ್ರೆಸ್ ಸೇರ್ಪಡೆ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಏಪ್ರಿಲ್,8,2024 (www.justkannada.in): ಇತ್ತೀಚೆಗಷ್ಟೆ ನಿಧನರಾದ ಮಾಜ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಪತ್ನಿ ವಾಣಿ ಶಿವರಾಮ್ ಅವರು ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಹೃದಯಾಘಾತದಿಂದ  ಮಾಜಿ ಐಎಎಸ್ ಅಧಿಕಾರಿ ದಿ. ಕೆ. ಶಿವರಾಮ್ ನಿಧನರಾಗಿದ್ದರು. ಬಿಜೆಪಿ ಮುಖಂಡರು ಆಗಿದ್ದ ಅವರು ಈ ಬಾರಿ ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿತ್ತು.

ಈ ಮಧ್ಯೆ ಇದೀಗ ಕೆ. ಶಿವರಾಮ್ ಪತ್ನಿ ವಾಣಿ ಶಿವರಾಮ್ ಅವರು ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ  ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

Key words: K. Shivaram, wife, Congress

Font Awesome Icons

Leave a Reply

Your email address will not be published. Required fields are marked *