ಮಾಡೆಲ್ ಕೈಹಿಡಿದ ಬಾಲಿವುಡ್​ ಸ್ಟಾರ್ ರಣದೀಪ್ ಹೂಡಾ

ಬಿ ಟೌನ್​ನ ಖ್ಯಾತ ನಟ ರಣದೀಪ್ ಹೂಡಾ, ನಟಿ, ಮಾಡೆಲ್ ಲಿನ್ ಲೈಶ್ರಾಮ್​ರನ್ನು ನಿನ್ನೆ ವರಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮದ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಹರಿಯಾಣ ಮೂಲದ ರಣದೀಪ್, ಮಣಿಪುರ ಮೂಲದ ಲಿನ್​​ರನ್ನು ಮಣಿಪುರದ ಮೈಥೇಯಿ ಸಂಪ್ರದಾಯದಂತೆ ಇಂಫಾಲ್‌ನ ಚುಮ್ತಾಂಗ್ ಶಾನಪುಂಗ್ ರೆಸಾರ್ಟ್‌ನಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಮದುವೆ ಸಮಾರಂಭದಲ್ಲಿ ಸ್ನೇಹಿತರು, ಕುಟುಂಬಸ್ಥರು ಮಾತ್ರ ಹಾಜರಿದ್ದರು.

ವಧುವಿನ ಸಂಪ್ರದಾಯದಂತೆ ಮದುವೆಯಾಗುವುದು ಗೌರವಯುತವಾದದ್ದು, ನಾನು ಅವರ ಸಂಪ್ರದಾಯವನ್ನು ತುಂಬಾ ಗೌರವಿಸುತ್ತೇನೆ ಎಂದಿರುವ ರಣದೀಪ್ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

 

 

Font Awesome Icons

Leave a Reply

Your email address will not be published. Required fields are marked *