ಮಾರ್ಚ್ 2ರಂದು ಹಿಂದಿ ಕಿರುತೆರೆ ನಟಿ ಸುರಭಿ ಚಂದ್ನಾ ಮದುವೆ

ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿರುವ ಸುರಭಿ ಚಂದ್ನಾ ಮದುವೆ ಆಗಲು ರೆಡಿಯಾಗಿದ್ದಾರೆ. ಸುರಭಿ ತನ್ನ ಬಹುಕಾಲದ ಗೆಳೆಯ ಕರಣ್ ಶರ್ಮಾ ಜೊತೆ ಜೈಪುರನಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ ಎನ್ನಲಾಗಿದೆ.

ನಟಿ ಸುರಭಿ ಅವರು ಉದ್ಯಮಿ ಕರಣ್ ಶರ್ಮಾ ಜೊತೆ ಕಳೆದ 13 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈಗ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮಾರ್ಚ್‌ 2ರಂದು ಮದುವೆ ಆಗಲಿದ್ದಾರೆ.

ಈ ಜೋಡಿಯ ಮದುವೆ ನಾಳೆ ಜೈಪುರ ರಾಜಸ್ಥಾನದ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿದೆ. ಮೆಹೆಂದಿ, ಅರಿಶಿನ ಶಾಸ್ತ್ರದ ಕಾರ್ಯಕ್ರಮಗಳು ಈಗಾಗಲೇ ಶುರುವಾಗಿದೆ.

Font Awesome Icons

Leave a Reply

Your email address will not be published. Required fields are marked *