ಮಾಲ್ಡೀವ್ಸ್ ಸಂಸದರ ಪರಸ್ಪರ ಹೊಡೆದಾಟ: ಸಂಸತ್ತಿನಲ್ಲಿ ಕೋಲಾಹಲ

ಮಾಲೆ: ಇಂದು ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝು ಸಂಪುಟ ಸಚಿವರ ನೇಮಕಕ್ಕೆ ಅನುಮೋದನೆ ಪಡೆಯಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಸಂಸದರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕ್ರಮವಾಗಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟಗಳಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಹಾಗೂ ಪ್ರೊಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಸಂಸದರ ನಡುವೆ ಘರ್ಷಣೆ ನಡೆದಿದ್ದರಿಂದ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಯಿತು.

ಅಂತರ್ಜಾಲದಲ್ಲಿ ಕಂಡು ಬರುತ್ತಿರುವ ವಿಡಿಯೊಗಳ ಪ್ರಕಾರ, ಸಂಸದರು ಪರಸ್ಪರ ಗುದ್ದಾಡಿಕೊಂಡಿದ್ದರಿಂದ ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಕೆಲವು ಸಂಸದರು ಪರಸ್ಪರ ವೇದಿಕೆಯಿಂದ ಕೆಳಗೆ ತಳ್ಳಿಕೊಂಡಿರುವ ಘಟನೆಗಳೂ ಸೆರೆಯಾಗಿವೆ. ಈ ವಿಡಿಯೊವನ್ನು ಮಾಲ್ಡೀವ್ಸ್ ನ ಸ್ಥಳೀಯ ಸುದ್ದಿ ಸಂಸ್ಥೆಯಾದ ಅಧಂಧು ಕೂಡಾ ಹಂಚಿಕೊಂಡಿದೆ.

ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಪಿಎನ್‍ಸಿ ಮತ್ತು ಪಿಪಿಎಂ, ಎಂಡಿಪಿಯು ತನ್ನ ನಾಲ್ವರು ಸದಸ್ಯರು ಸಂಪುಟ ಸೇರ್ಪಡೆಯಾಗಲು ಅನುಮೋದನೆ ನೀಡದಿರುವ ನಡೆಯಿಂದ ಜನರಿಗೆ ಸೇವೆ ಒದಗಿಸಲು ತೊಂದರೆ ಉಂಟಾಗಿದೆ ಎಂದು ಹೇಳಿವೆ.

ಸಂಸತ್ತಿನೊಳಗಿನ ಚಿತ್ರೀಕರಿಸಿರುವ ವಿಡಿಯೊಗಳಲ್ಲಿ ಸಂಸದರು ಪರಸ್ಪರ ನೆಲದ ಮೇಲೆ ಗುದ್ದಾಡುತ್ತಿರುವುದು ಹಾಗೂ ಓರ್ವ ಸಂಸದನ ಕೂದಲನ್ನ ಎಳೆದಾಡುತ್ತಿರುವುದು ಸೆರೆಯಾಗಿದೆ.

Font Awesome Icons

Leave a Reply

Your email address will not be published. Required fields are marked *