ಮಿಜೋರಾಂನಲ್ಲಿ ‘ಬರ್ಮಾ ಸೇನಾ’ ವಿಮಾನ ಪತನ

ಮಿಜೋರಾಂ: ಬರ್ಮಾ ಸೇನೆಯ ವಿಮಾನವೊಂದು ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ರನ್​​ವೇಯಿಂದ ಜಾರಿದ ವಿಮಾನ ಹೊಲಕ್ಕೆ ಹೋಗಿ ಅಪ್ಪಳಿಸಿದೆ. ಘಟನೆ ಮಿಜೋರಾಂ ಲೆಂಗ್​ಪುಯಿ ಎರ್​ಪೋರ್ಟ್​​ ಬಳಿ ನಡೆದಿದೆ.

ಮಯನ್ಮಾರ್​​ ಬಂಡುಕೋರರು ನಡೆಸಿದ ಗಲಭೆ ವೇಳೆ ಜೀವ ಉಳಿಸಿಕೊಳ್ಳುವ ಸಲುವಾಗಿ ಸೇನಾ ಸಿಬ್ಬಂದಿ ಇಶಾನ್ಯದಲ್ಲಿ ಆಶ್ರಯ ಪಡೆದಿದ್ದರು. ಇವರನ್ನು ಏರ್​ಲಿಫ್ಟ್ ಮಾಡುವ ಸಂಬಂಧ ಮಯನ್ಮಾರ್​ ವಿಮಾನವು ಮಿಜೋರಾಂ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಇಲ್ಲಿಂದ ಹೊರಡುವ ವೇಳೆ ರನ್​​ವೇ ನಿಂದ ಜಾರಿ ಅನಾಹುತ ಸಂಭವಿಸಿದೆ.

ಭಾರತವು ನಿನ್ನೆ ಸುಮಾರು 184 ಮಯನ್ಮಾರ್ ಸೈನಿಕರನ್ನು ಸುರಕ್ಷಿತವಾಗಿ ತವರಿಗೆ ಕಳುಹಿಸಿದೆ. ಅಸ್ಸಾಂ ರೈಫಲ್ಸ್​ ನೀಡಿರುವ ಮಾಹಿತಿ ಪ್ರಕಾರ ಮಯನ್ಮಾರ್​ನಲ್ಲಿ ಉಂಟಾದ ಘರ್ಷಣೆ ಬೆನ್ನಲ್ಲೇ, ಅಲ್ಲಿಂದ ಒಟ್ಟು 276 ಯೋಧರು ಭಾರತವನ್ನು ಪ್ರವೇಶ ಮಾಡಿದ್ದಾರೆ. ಅವರಲ್ಲಿ 184 ಸಿಬ್ಬಂದಿಯನ್ನು ವಾಪಸ್ ಕಳುಹಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *