ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ವತಿಯಿಂದ 75ನೇ ಗಣರಾಜ್ಯೋತ್ಸವ ದಿನಾಚರಣೆ

ಮಂಗಳೂರು: ಜನವರಿ 26, 2024ರಂದು ಮಂಗಳೂರು ಮಿಲಾಗ್ರಿಸ್ ವಿದ್ಯಾ ಸಂಸ್ಥೆಯ ವತಿಯಿಂದ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಡಳಿತ ಮಂಡಳಿಯ ಸದಸ್ಯರಾದ ಸಿ. ಎ. ಡೈಲನ್ ರೆಬೆಲ್ಲೊ, ಧ್ವಜರೋಹಣ ನೆರವೇರಿಸಿ ತಮ್ಮ ಭಾಷಣದಲ್ಲಿ “ಸ್ವಾತಂತ್ರ್ಯ ಹೋರಾಟಗಾರರ ಮಹಾನ್ ಆದರ್ಶ, ಮೌಲ್ಯ, ಹಾಗೂ ತ್ಯಾಗಗಳ ಬಗ್ಗೆ ತಿಳಿಸುತ್ತಾ ಯುವಕರು ದೇಶ ಭಕ್ತಿಯ ಜೊತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂದ. ಗುರುಗಳಾದ ಮೈಕಲ್ ಸಾಂತೂಮಾಮಾಯೋರ್ ಅಧ್ಯಕ್ಷ ತೆಯನ್ನು ವಹಿಸಿದರು. ಮಿಲಾಗ್ರಿಸ್ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಬ್ಯೂಲಾರಿಗೊ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೆಲ್ವಿನ್ ವಾಸ್, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ವಂದ ಗುರು. ಉದಯ ಫೆರ್ನಾಂಡಿಸ್, ಈ ಕಾರ್ಯಕ್ರಮದ ಸಂಯೋಜಕರಾದ ಶೈಲಾ ಮೋರಸ್ ಇವರು ಉಪಸ್ಥಿತರಿದ್ದರು.

ಸಿಸ್ಟೆರ್ ಡೊರತಿ ಸ್ವಾಗತಿಸಿ, ವಿದ್ಯಾರ್ಥಿ ಸಮಾರ್ಥ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ
ಗ್ಲಾನ್ಸಿಯಾ ವಂದಿಸಿದರು.

Font Awesome Icons

Leave a Reply

Your email address will not be published. Required fields are marked *