ಮಿಲಿಟರಿ ಮ್ಯಾನ್‌ ಆಗಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಒಳ್ಳೆ ಹುಡಗ ಪ್ರಥಮ್‌

ಬೆಂಗಳೂರು: ಒಳ್ಳೆ ಹುಡುಗ ಪ್ರಥಮ್‌ ಈ ಹಿಂದೆ ಬಿಗ್‌ ಬಾಸ್‌ ಟ್ರೋಫಿ ಗೆದ್ದಿದ್ದರು. ಈಗ ಮತ್ತೊಮ್ಮೆ ಅವರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಯೊಳಗೆ ದಿ ವಿಲನ್’ ಸಿನಿಮಾದ ಹಾಡನ್ನು ಪ್ರಸಾರ ಮಾಡಲಾಗಿದೆ.

ಮನೆ ಒಳಗೆ ಮಿಲಿಟಿರಿ ಡ್ರೆಸ್ ಧರಿಸಿದ ಒಂದಷ್ಟು ಮಂದಿ ಆಗಮಿಸಿದ್ದಾರೆ. ಆ ಬಳಿಕ ಪ್ರಥಮ್ ಎಂಟ್ರಿ ಆಗಿದೆ. ಬಂದವರೇ ಅವರು ಎಲ್ಲರ ಮೇಲೆ ರೇಗಾಡಿದ್ದಾರೆ. ಸಖತ್ ಸ್ಟ್ರಿಕ್ಟ್ ಆಗಿ ನಡೆದುಕೊಂಡಿದ್ದಾರೆ. ‘ತಮಾಷೆ ಮಾಡಿದ್ರೆ ಅಮಾಸೆ ತೋರಿಸೋ ಲಾರ್ಡ್ ಪ್ರಥಮ್ ಬಂದ್ರು’ ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

ಸದ್ಯ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಗಮನ ಸೆಳೆಯುತ್ತಿದೆ. ಮನೆ ಒಳಗೆ ಬಂದಿರೋ ಪ್ರಥಮ್ ಅವರ ಪೂರ್ಣ ಎಪಿಸೋಡ್​ ನೋಡುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ದೊಡ್ಮನೆಯಲ್ಲಿ ಸೀಸನ್ 10ರ ಮೊದಲ ಕ್ಯಾಪ್ಟನ್ ಸ್ನೇಹಿತ್ ಆಗಿದ್ದಾರೆ. ಟಾಸ್ಕ್ ಗೆದ್ದು ಅವರು ಮುಂದಿನ ವಾರದ ನಾಮಿನೇಷನ್​ನಿಂದ ಬಚಾವ್ ಆಗಿದ್ದಾರೆ.

Font Awesome Icons

Leave a Reply

Your email address will not be published. Required fields are marked *