ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ದಕ್ಷಿಣ ಆಫ್ರಿಕಾ:  ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ಮೀನುಗಾರಿಕಾ ದೋಣಿ ಮುಳುಗಿ 90 ಮಂದಿ ಜಲ ಸಮಾಧಿಯಾಗಿರುವ ಘಟನೆ ನಡೆದಿದೆ.

ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬದುಕುಳಿದ 5 ಜನರಲ್ಲಿ 2 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿ ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ.

ಈ ದೋಣಿ, ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿಲ್ಲ, ಹಾಗೂ ದೋಣಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮೊಜಾಂಬಿಕ್​ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚಾಗಿದ್ದು,ಇದರಿಂದಾಗಿ ಜನರು ಮೊಜಾಂಬಿಕ್​ನಿಂದ ವಲಸೆ ಹೋಗುತ್ತಿದ್ದಾರೆ, ಇದಲ್ಲದೇ ನೆರೆಯ ಕಾಬೋ ಡೆಲ್ಗಾಡೊದಲ್ಲಿ ಜಿಹಾದಿ ದಾಳಿಯಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುವವರ ಸಂಖ್ಯೆಯೂ ಹೆಚ್ಚಿದೆ.

ಹೆಚ್ಚಿದೆ. ಅಕ್ಟೋಬರ್ 2023 ರಿಂದ ಸುಮಾರು 15,000 ಪ್ರಕರಣಗಳನ್ನು ವರದಿ ಮಾಡಿದೆ, 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *