ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನೀಡಿದ ವಿಗ್ರಹ ಆಗಮನ

ಮುಂಡ್ಕೂರು: ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಯೋಧ್ಯ ಶ್ರೀ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಮಂಗಳೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡ ಇನ್ನ ಮುಂಡ್ಕೂರು ದೇವಸ್ಥಾನದ ಪವಿತ್ರ ಪಾಣಿ ಹಾಗೂ ಎಎಂಎಸ್ ಕಂಪನಿ ಆಡಳಿತ ನಿರ್ದೇಶಕ ರಾಮದಾಸ್ ಮಾಡ್ಮಣ್ಣಾಯ ಅವರಿಗೆ ಉಡುಪಿ ಪೇಜಾವರ ಮಠಾಧೀಶ ಶ್ರೀ ಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರೀರಾಮಚಂದ್ರ ಲಕ್ಷ್ಮಣ, ಸೀತಾ ಮಾತೆ ಹಾಗೂ ಹನುಮ ದೇವರ ಭಕ್ತಿಯ ಸ್ಮರಣಕ್ಕೆಯನ್ನು ಅಯೋಧ್ಯೆಯಲ್ಲಿ ನೀಡಿದರು. ಅದನ್ನು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೆರವಣಿಗೆಯಿಂದ ತಂದು ದೇವರ ತೀರ್ಥ ಮಂಟಪದಲ್ಲಿ ಇಟ್ಟು ಪೂಜಿಸಲ್ಪಟ್ಟಿತು.

ಈ ಸಂದರ್ಭದಲ್ಲಿ ಮುಂಡ್ಕೂರು ದೇವಸ್ಥಾನದ ಪವಿತ್ರ ಪಾಣಿ ರಾಮದಾಸ್ ಮಡ್ಮಣ್ಣಾಯ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ್ ಆಚಾರ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುರೇಂದ್ರ ಶೆಟ್ಟಿ ಕೋರಿಬೆಟ್ಟು ಗುತ್ತು ಸದಸ್ಯರಾದ ಕೃಷ್ಣ ಪೂಜಾರಿ ಬಂಟ್ರೋಟ್ಟು, ಶೇಖರ್ ಶೆಟ್ಟಿ ಮಾಣಿಬೆಟ್ಟು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

Font Awesome Icons

Leave a Reply

Your email address will not be published. Required fields are marked *