ಮುಂಬೈ: ಖ್ಯಾತ ಗೀತರಚನೆಕಾರ ದೇವ್ ಕೊಹ್ಲಿ ನಿಧನ

ಮುಂಬೈ: ಬಾಜಿಗರ್, ಟ್ಯಾಕ್ಸಿ ನಂಬರ್ ಸೇರಿದಂತೆ ಹಲವಾರು ಬಾಲಿವುಡ್ ಸಿನಿಮಾಗಳಿಗೆ ಗೀತ ರಚನೆ ಮಾಡಿರುವ ದೇವ್ ಕೊಹ್ಲಿ ನಿಧನರಾಗಿದ್ದಾರೆ. 82ರ ವಯಸ್ಸಿನ ದೇವ್ ಕೊಹ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ದೇವ್ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯೆಜಿಸಿದ್ದಾರೆ.

ಅವರು ವಾಸವಿದ್ದ ಲೋಕಂಡವಾಲಾ ಕಾಂಪ್ಲೆಕ್ಸ್ ಜುಪಿಟರ್ ಅಪಾರ್ಟ್ ಮೆಂಟ್ ನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜೋಗೇಶ್ವರಿ ವೆಸ್ಟ್ ಉಪನಗರ ಒಶಿವಾರ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ದೇವ್ ಜನಿಸಿದ್ದರು. ಸಿನಿಮಾ ರಂಗದಲ್ಲಿ ಕೆಲಸ ಮಾಡುವುದಕ್ಕಾಗಿಯೇ ಅವರು ಮುಂಬೈಗೆ ಬಂದಿದ್ದರು. ನೂರಾರು ಹಿಟ್ ಹಾಡುಗಳನ್ನು ನೀಡುವ ಮೂಲಕ ದೇವ್ ನೆಚ್ಚಿನ ಸಾಹಿತ್ಯ ರಚನೆಕಾರರು ಆಗಿದ್ದರು.

Font Awesome Icons

Leave a Reply

Your email address will not be published. Required fields are marked *