ಮುಂಬೈ: ಹಿರಿಯ ನಟ ಜೂನಿಯರ್ ಮೆಹಮೂದ್ ನಿಧನ

ಮುಂಬೈ: ಜೂನಿಯರ್ ಮೆಹಮೂದ್ ಎಂದೇ ಖ್ಯಾತರಾಗಿದ್ದ ಬಾಲಿವುಡ್ ನಟ ನಯೀಮ್ ಸಯ್ಯದ್ ಗುರುವಾರ ತಡ ರಾತ್ರಿ 2 ಗಂಟೆಗೆ ಮುಂಬೈನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.

ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಇಂದು ಮಧ್ಯಾಹ್ನದ ಪ್ರಾರ್ಥನೆಯ ನಂತರ ಸಾಂತಾಕ್ರೂಜ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಅವರು 250ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಎರಡು ವಾರಗಳ ಹಿಂದಷ್ಟೇ ಅವರಿಗೆ ಕ್ಯಾನ್ಸರ್ ಇದ್ದು, ಅದೂ ನಾಲ್ಕನೇ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ಕಟಿ ಪತಂಗ್, ಮೇರಾ ನಾಮ್ ಜೋಕರ್, ಪರ್ವರೀಶ್ ಮತ್ತು ದೋ ಔರ್ ದೋ ಪಾಂಚ್ ಸೇರಿದಂತೆ ಹಲವಾರು ಹಿಟ್ ಚಿತ್ರಗಳಲ್ಲಿ ಜೂನಿಯರ್ ಮೆಹಮೂದ್ ನಟಿಸಿದ್ದರು.

ಸಿನಿಮಾ ಹೊರತಾಗಿ, ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಸ್ಟೇಜ್ ಶೋಗಳಲ್ಲಿಯೂ ಇಬ್ಬರೂ ಒಟ್ಟಿಗೆ ಭಾಗವಾಗಿಸಿದ್ದರು.

Font Awesome Icons

Leave a Reply

Your email address will not be published. Required fields are marked *