ಮೂರನೇ ಮಹಡಿಯಿಂದ ಪತ್ನಿಯನ್ನು ತಳ್ಳಿ ಕೊಲೆ ಮಾಡಿದ ಪತಿ ಅರೆಸ್ಟ್

ಗಾಜಿಯಾಬಾದ್: ಪತಿ ಪತ್ನಿ ನಡುವಿನ ಜಗಳ ಪತ್ನಿಯ ಸಾವಿನಲ್ಲಿ ಕೊನೆಯಾಗಿದೆ. ಜಗಳದ ವೇಳೆ ಕೋಪದಿಂದ ಪತಿಯೊಬ್ಬ ಪತ್ನಿಯನ್ನು 3ನೇ ಮಹಡಿಯಿಂದ ಕೆಳಗೆ ತಳ್ಳಿರುವ ಘಟನೆ ಗಾಜಿಯಾಬಾದ್​ನಲ್ಲಿ ಗೋವಿಂದಪುರಂ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ.

ಈ ವೇಳೆ ಮಹಿಳೆ ಸಾವನ್ನಪ್ಪಿದ್ದು, ಆರೋಪಿ ವಿಕಾಸ್​ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಮನೆಗೆ ಬಂದಿದ್ದ ಪತಿ, 30 ರ ಹರೆಯದ ಅವರ ಪತ್ನಿ ಜತೆಗೆ ತೀವ್ರ ಜಗಳವಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯನ್ನು ಮೂರನೇ ಮಹಡಿಯಿಂದ ಎಸೆದ ನಂತರ, ಆತನೇ ಪತ್ನಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದನು, ಅಲ್ಲಿ ವೈದ್ಯರು ಆಕೆ ಸತ್ತಿದ್ದಾಳೆ ಎಂದು ಹೇಳಿದ್ದಾರೆ.

ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರನ್ನು ಶನಿವಾರ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *