ಮೇ.31 ರಂದು ಎಸ್ ಐಟಿ ಮುಂದೆ ಪ್ರಜ್ವಲ್ ರೇವಣ್ಣ: ಮಾಜಿ ಸಿಎಂ ಹೆಚ್.ಡಿಕೆ ಪ್ರತಿಕ್ರಿಯೆ ಏನು..? » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಚಿಕ್ಕಬಳ್ಳಾಪುರ,ಮೇ,27,2024 (www.justkannada.in):  ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಒಂದು ತಿಂಗಳ ಬಳಿಕ ವಿಡಿಯೋ ಮೂಲಕ ಪ್ರತ್ಯಕ್ಷರಾದ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಬೆಳಗ್ಗೆ 10.30ಕ್ಕೆ ಎಸ್​​ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದು ಈ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, , ಎಲ್ಲೇ ಇದ್ದರೂ ಬಂದು ಎಸ್‌ಐಟಿ ಮುಂದೆ ಹಾಜರಾಗಿ ತನಿಖೆಗೆ ಸಹಕಾರ ಕೊಡುವಂತೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಹಾಗೂ ನಾನು  ಮನವಿ ಮಾಡಿದ್ದವು.  ಕಾರ್ಯಕರ್ತರ ಮೇಲೆ ನಂಬಿಕೆ ಇದ್ದರೆ ಕೂಡಲೇ ಬರಬೇಕು ಎಂದು ಹೇಳಿದ್ದೆವು. ಇದೀಗ ನಮ್ಮ ಮನವಿಗೆ ಓಗೊಟ್ಟು ಬರುತ್ತಿರುವುದು ನಮಗೂ ಸ್ವಲ್ಪ ಸಮಾಧಾನ ತಂದಿದೆ ಎಂದು ತಿಳಿಸಿದರು.

ಪ್ರಜ್ವಲ್ ರೇವಣ್ಣ ವಿಡಿಯೋಗಳ ಪ್ರಕರಣದಲ್ಲಿ  ದೊಡ್ಡ ಷಡ್ಯಂತ್ರ ಇದೆ. ಇಲಾಖೆ ನಿರ್ವಹಣೆ ಬದಲು ಈ ಖೇಸ್ ಗೆ ಸಲಹೆಗಾರರಾಗದ್ದಾರೆ. ನಿನ್ನೆಯಿಂದ ಕೇಸ್ ಬಗ್ಗೆ ಪ್ರಚಾರದ ತೀವ್ರತೆ ಕಡಿಮೆಯಾಗಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಬದಲು ಈ ಕೇಸ್ ನಲ್ಲಿ ಷಡ್ಯಂತ್ರ ನಡೆದಿದೆ.  ನಾನು ವೈಯಕ್ತಿಕವಾಗಿ ಯಾರನ್ನೂರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: Prajwal Revanna, SIT, reaction, HDK

Previous articleಪರಿಷತ್ ಚುನಾವಣೆ: ‘ಕೈ’ ಅಭ್ಯರ್ಥಿ ಮರಿತಿಬ್ಬೆಗೌಡರಿಗೆ ಗೆಲ್ಲಿಸುವಂತೆ ಮಾಜಿ ಮೇಯರ್ ಗಳಿಂದ ಮನವಿ.

Font Awesome Icons

Leave a Reply

Your email address will not be published. Required fields are marked *