ಮೈಕ್ರೊಸಾಫ್ಟ್‌ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ನ್ಯೂಯಾರ್ಕ್:‌ ಭಾರತದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ಚೀನಾ ಏಐ ಬಳಸಿಕೊಂಡು ತನ್ನ ಹಿತಕ್ಕೆ ತಕ್ಕ ವಿಷಯವನ್ನು ಹರಡುವ ಕೆಲಸ ಮಾಡಬಹುದು ಎಂದು ಟೆಕ್‌ ದಿಗ್ಗಜ ಮೈಕ್ರೊಸಾಫ್ಟ್‌ ಎಚ್ಚರಿಸಿದೆ.

ಏಐ ಬಳಸಿ ತಯಾರಿಸಲಾದ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಭಾರತ, ದಕ್ಷಿಣ ಕೊರಿಯಾ ಮತ್ತು ಅಮೇರಿಕಾದ ಜನತೆಯಲ್ಲಿ ಚೀನಾ ತನ್ನ ಅನುಕೂಲಕ್ಕೆ ತಕ್ಕ ಯೋಚನೆಗಳನ್ನು ಬಿತ್ತುವ ಸಾಧ್ಯತೆಯಿದೆ. ಈ ಕೆಲಸದಲ್ಲಿ ಉತ್ತರ ಕೊರಿಯಾ ಕೂಡ ಕೈಜೋಡಿಸಲಿದೆ.

ಭಾರತದಲ್ಲಿ ಏ.೧೯ರಿಂದ ಜೂ.೪ರ ವರೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ದಕ್ಷಿಣ ಕೊರಿಯಾದಲ್ಲಿ ಏ.೧೦ರಂದು ಚುನಾವಣೆಯಿದ್ದು, ಅಮೇರಿಕಾ ಅಧ್ಯಕ್ಷೀಯ ಚುನಾವಣೆ ನ.೫ರಂದು ನಡೆಯಲಿದೆ.

Font Awesome Icons

Leave a Reply

Your email address will not be published. Required fields are marked *