ಮೈಸೂರು: ಆ.20ರಂದು ‘ಮುಟ್ಟಿಸಿಕೊಂಡವನು’ ನಾಟಕ ಪ್ರದರ್ಶನ

ಮೈಸೂರು: ರಂಗಾಯಣದ ಹಿರಿಯ ಕಲಾವಿದರಾದ ಕೆ.ಆರ್. ನಂದಿನಿ ಅವರ ನಿರ್ದೇಶನದಲ್ಲಿ ರಂಗಾಯಣದ ಹಿರಿಯ ಕಲಾವಿದರು ಪ್ರಸ್ತುಪಡಿಸುತ್ತಿರುವ `ಮುಟ್ಟಿಸಿಕೊಂಡವನು’ ನಾಟಕದ ಪ್ರಥಮ ಪ್ರದರ್ಶನ ಆಗಸ್ಟ್ 20 ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ನವ್ಯಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪಿ. ಲಂಕೇಶ್ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದವರು. ಅವರು ಬರೆದ ಹಲವಾರು ವಿಶೇಷ ಕಥೆಗಳಲ್ಲಿ ‘ಮುಟ್ಟಿಸಿಕೊಂಡವನು’ ಕಥೆಯು ಕೂಡ ಒಂದಾಗಿದೆ. ಜಾತಿ ಪದ್ಧತಿ ಶತಶತಮಾನಗಳ ಕಾಲದಿಂದಲೂ ಬೆಳೆದು ಬಂದಿರುವ ಕ್ರೂರ ಪದ್ಧತಿ, ಜಾತಿಯ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ನೋಡುವ ಮೌಢ್ಯ, ಆ ನೆಲೆಯಲ್ಲಿ ನಡೆದ ಶೋಷಣೆ ಸಂಪೂರ್ಣವಾಗಿ ಇನ್ನೂ ಹೋಗಿಲ್ಲ.

ಶಿಕ್ಷಣ, ನಗರೀಕರಣ, ವಿಜ್ಞಾನದ ಬೆಳವಣಿಗೆಗಳಿಂದಲೂ ನಮ್ಮ ದೇಶ ಜಾತಿ ಪದ್ಧತಿಯಿಂದ ಮುಕ್ತವಾಗದಿರುವುದು ನಮ್ಮ ದುರಂತ. ವ್ಯಕ್ತಿ ವ್ಯಕ್ತಿಯ ನಡುವಿನ ತಾರತಮ್ಯ ಭಾವವಳಿದು ಮಾನವೀಯವಾಗಿ ನೋಡುವ ಗುಣ ಬೆಳೆಯಬೇಕಾಗಿದೆ ಮತ್ತು ಶರಣರ, ಸಂತರ ಸಮಾನತೆಯ ಆಶಯ ಸಾಕಾರಗೊಳ್ಳಬೇಕಿದೆ. ಬದಲಾವಣೆಗಾಗಿ ಹಂಬಲಿಸುತ್ತಿರುವ ಸಮಾಜಕ್ಕೆ ಬಿಡುಗಡೆಯ ದಾರಿಯನ್ನು ತೋರಿಸುವ ದಿಕ್ಕಿನಲ್ಲಿ ಈ ಕತೆ ಮಹತ್ವದ್ದಾಗಿದೆ.

ಮೈಸೂರು ರಂಗಾಯಣವು ಸಮಾಜದಲ್ಲಿಯ ಇಂತಹ ಅಸಮಾನತೆಯನ್ನು ಹೋಗಲಾಡಿಸಿ, ಸಮಸಮಾಜದ ನಿರ್ಮಾಣ ಮಾಡುವ ಆಶಯದಿಂದ ತನ್ನ ಸಾಂಸ್ಕೃತಿಕ ಜವಾಬ್ದಾರಿಯ ಮೂಲಕ ಕರ್ತವ್ಯ ನಿರ್ವಹಿಸಿಕೊಂಡು ಬಂದಿದೆ. ಇದೀಗ ಲಂಕೇಶ್ ಕಥೆಯಾಧಾರಿತ ನಾಟಕ ಪ್ರದರ್ಶನವಾಗುತ್ತಿದೆ.

Font Awesome Icons

Leave a Reply

Your email address will not be published. Required fields are marked *