ಮೊಯೆ ಮೊಯೆ ಹಾಡಿಗೆ ಸಿಗ್ನೇಚರ್​ ಸ್ಪೆಪ್ಸ್ ಹಾಕಿದ ಕೊಹ್ಲಿ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಜಯಭೇರಿ ಸಾಧಿಸಿತ್ತು. 2ನೇ ಸೂಪರ್​ ಓವರ್​ನಲ್ಲಿ 10 ರನ್​ಗಳಿಂದ ಗೆದ್ದಿತ್ತು. ಪಂದ್ಯ ಟೈ ಆದ ಬಳಿಕ ಮೊಯೆ ಮೊಯೆ ಹಾಡಿಗೆ ವಿರಾಟ್ ಕೊಹ್ಲಿ ಸಿಗ್ನೇಚರ್​ಸ್ಪೆಪ್ಸ್ ಹಾಕಿದ್ದರು.

ಮೈದಾನದಲ್ಲಿದ್ದ ಅಭಿಮಾನಿಗಳು ಈ ಹಾಡಿಗೆ ಸ್ಟೆಪ್ಸ್ ಹಾಕಿದರು. ಮೊಯೆ ಮೊಯೆ ಎಂದು ಇಡೀ ಮೈದಾನವೇ ಪ್ರತಿಧ್ವನಿಸಿತು. ಹಾಡನ್ನು ಪ್ಲೇ ಮಾಡುತ್ತಿದ್ದಂತೆ ಕೊಹ್ಲಿ ಕಣ್ಮುಚ್ಚಿಕೊಂಡು ಸೊಂಟ ಬಳುಕಿಸಿದರು. ಅಭಿಮಾನಿಗಳು ವಿಭಿನ್ನ ಕಮೆಂಟ್​ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ.

ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಒಂದು ಹಂತದಲ್ಲಿ 22 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಆ ಬಳಿಕ ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ದಾಖಲೆ 190 ರನ್​ಗಳ ಜೊತೆಯಾಟಿಡಿದರು.

Font Awesome Icons

Leave a Reply

Your email address will not be published. Required fields are marked *