ಮೋದಿ ಭಾವಚಿತ್ರವಿರುವ ಟೀ ಶರ್ಟ್‌, ಟೋಪಿ ಜಪ್ತಿ

ಬೀದರ್ :  ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ, ಬಿಜೆಪಿಯ ಕಮಲ ಚಿಹ್ನೆ ಹೊಂದಿರುವ ಟೀ ಶರ್ಟ್‌, ಟೋಪಿಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹9.51 ಲಕ್ಷ ಎಂದು ಅಂದಾಜಿಸಲಾಗಿದೆ.

ಚುನಾವಣಾಧಿಕಾರಿಯಿಂದ ಅನುಮತಿ ಪಡೆಯದೇ ಟೀ ಶರ್ಟ್‌, ಟೋಪಿಗಳನ್ನು ಕಲಬುರಗಿಯಿಂದ ಬೀದರ್‌ ಕಡೆಗೆ ಮಂಗಳವಾರ ಸಾಗಿಸಲಾಗುತ್ತಿತ್ತು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ತುಮಕುಂಟಾ ಚೆಕ್‌ಪೋಸ್ಟ್‌ ಬಳಿ ವಾಹನ ಪರಿಶೀಲಿಸಿದಾಗ ಪತ್ತೆಯಾಗಿವೆ. ಅನುಮತಿ ಪಡೆಯದ ಕಾರಣ ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಚಾರಕ್ಕೆ ಸಾಮಗ್ರಿಗಳನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಚಿಂಚೋಳಿ ತಾಲ್ಲೂಕು ಬೀದರ್‌ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

Font Awesome Icons

Leave a Reply

Your email address will not be published. Required fields are marked *