ಮೋದಿ ‘ಮನ್ ಕಿ ಬಾತ್’: 26/11 ದಾಳಿ ಹುತಾತ್ಮರನ್ನು ಸ್ಮರಿಸಿದ ಪ್ರಧಾನಿ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರು, ನವೆಂಬರ್ 26, 2023 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 107 ನೇ ಸಂಚಿಕೆಯಲ್ಲಿ 26/11 ದಾಳಿಯಲ್ಲಿ ಹುತಾತ್ಮರಾದವರನ್ನು ಸ್ಮರಿಸಿದ್ದಾರೆ.

ನವೆಂಬರ್ 26 ಅನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನವೇ ದೇಶವು ಅತ್ಯಂತ ಭೀಕರ ಭಯೋತ್ಪಾದಕ ದಾಳಿಗೆ ಒಳಗಾಯಿತು ಎಂದು ಮೋದಿ ಹೇಳಿದ್ದಾರೆ.

ಜತೆಗೆ ನವೆಂಬರ್ 26 ಮತ್ತೊಂದು ಕಾರಣಕ್ಕಾಗಿ ಅತ್ಯಂತ ಮಹತ್ವದ್ದಾಗಿದೆ. 1949 ರಲ್ಲಿ ಇದೇ ದಿನ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸಿತು ಎಂದು ಪ್ರಧಾನಿ ಸ್ಮರಿಸಿದ್ದಾರೆ.

ಸ್ವಚ್ಛ ಭಾರತ ಅಭಿಯಾನದ ಯಶಸ್ಸು ಸ್ಫೂರ್ತಿಯಾಗುತ್ತಿರುವಂತೆಯೇ, ‘ವೋಕಲ್ ಫಾರ್ ಲೋಕಲ್’ ಯಶಸ್ಸು ‘ಅಭಿವೃದ್ಧಿ ಹೊಂದಿದ ಭಾರತ – ಸಮೃದ್ಧ ಭಾರತ’ಕ್ಕೆ ನೆರವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Previous articleಕ್ರಿಕೆಟ್: ಟೀಂ ಇಂಡಿಯಾ-ಆಸ್ಟ್ರೇಲಿಯಾ 2ನೇ ಟಿ-20 ಪಂದ್ಯ ಇಂದು


Font Awesome Icons

Leave a Reply

Your email address will not be published. Required fields are marked *