ಕಲಬುರಗಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಶುಗರ್ ಫ್ಯಾಕ್ಟರಿ ಬಂದ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ನೀಡಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಸಿದ್ದಶ್ರೀ ಸಕ್ಕರೆ ಕಾರ್ಖಾನೆ ಬಂದ್ಗೆ ಸೂಚಿಸಿಸಲಾಗಿದೆ.
ಸಿದ್ದಶ್ರೀ ಸಕ್ಕರೆ ಕಾರ್ಖಾನೆ ವಿರುದ್ಧ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬಿಡಲಾಗುತ್ತಿತ್ತು ಎನ್ನೋ ಆರೋಪ ಕೇಳಿ ಬಂದಿದೆ. ಅಲ್ಲದೇ ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿನ್ನೆಲೆ ಫ್ಯಾಕ್ಟರಿ ಬಂದ್ಗೆ ಆದೇಶ ನೀಡಲಾಗಿದೆ.
ಇದರ ಜೊತೆಯಲ್ಲಿ ಫ್ಯಾಕ್ಟರಿಗೆ ನೀಡರೋ ವಿದ್ಯುತ್ ನೀರಿನ ಸಂರ್ಪಕ ಕಡಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.