ಯದುವೀರ್ ಪರ ನಿಂತ  ಹೆಚ್. ವಿಶ್ವನಾಥ್ : ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪ್ರತಿಕ್ರಿಯೆ ಏನು..? – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು,ಏಪ್ರಿಲ್, 4,2024 (www.justkannada.in):  ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬ್ಯಾಟ್ ಬೀಸಿರುವ ವಿಚಾರ ಕುರಿತು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು  ಮಾತನಾಡಿರುವ  ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್,  ಹೆಚ್. ವಿಶ್ವನಾಥ್ ಈಗಾಗಲೇ ಬಿಜೆಪಿಯಿಂದ ಎಂಎಲ್ ಸಿ ಆಗಿದ್ದಾರೆ. ಅವರು ಬಿಜೆಪಿ ಪಕ್ಷದವರು. ಅವರ ಅಭ್ಯರ್ಥಿ ಪರ ನಿಲ್ಲುವುದು ಸಹಜ‌. ಅವರು ನಮ್ಮ ಪಕ್ಷದವರಲ್ಲ ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನನ್ನ ಪರವಾಗಿ ಸಿಎಂ, ಡಿಸಿಎಂ ನಮ್ಮ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳು,ಜನಪರ ಆಡಳಿತ ನನ್ನ ಕೈಹಿಡಿಯಲಿವೆ ಎಂಬ ನಂಬಿಕೆ ಇದೆ ಎಂದರು.

ನನ್ನ ಬಗ್ಗೆ ಮಾತನಾಡುವ ಬದಲು ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು ಅಂತ ಹೇಳಿ.

ಪ್ರತಾಪ್ ಸಿಂಹ ನನ್ನ ಸ್ನೇಹಿತ, ಸೈದ್ದಾಂತಿಕವಾಗಿ ನಮ್ಮ‌ಲ್ಲಿ ಜೊತೆ ಭಿನ್ನಾಭಿಪ್ರಾಯ ಇರಬಹುದು. ನಾವು ಹೊರಗಡೆ ಬಂದರೆ ಜೊತೆಗೆ ಕೂತು ಕಾಫಿ ಕುಡಿಯುತ್ತೇವೆ. ಫೋನಿನಲ್ಲಿ ಮಾತಾಡುತ್ತೇವೆ ಬೇಕಾದರೆ ಈಗಲೇ ಫೋನ್ ಮಾಡಲಾ.? ಪ್ರತಾಪ್ ಸಿಂಹ ಸುಮ್ಮನೆ ರಾಜಕೀಯವಾಗಿ ನನ್ನನ್ನ ಟೀಕೆ ಮಾಡ್ತಾರೆ ಅಷ್ಟೇ. ಅವರು ನಾನು ಒಕ್ಕಲಿಗ ಅಲ್ಲಾ ಅನ್ನೋದಾದರೆ ಅದನ್ನ ಸಾಬೀತು ಪಡಿಸಲಿ, ಜೊತೆಗೆ ನನ್ನ ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ ಆದಷ್ಟು ಬೇಗ ಕಳುಹಿಸಲಿ. ನನ್ನ ಬಗ್ಗೆ ಮಾತನಾಡುವ ಬದಲು ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು ಅಂತ ಹೇಳಿ ಎಂದು ಎಂ. ಲಕ್ಷ್ಮಣ್ ಲೇವಡಿ ಮಾಡಿದರು.

Key words: H.Vishwanath, Yaduveer, M Laxman


Previous articleಸಂಸದೆ ಸುಮಲತಾ ಅಂಬರೀಶ್ ನಿರ್ಧಾರ ಸ್ವಾಗತಿಸಿದ ಹೆಚ್.ಡಿಕೆ.


Font Awesome Icons

Leave a Reply

Your email address will not be published. Required fields are marked *