ಯಶ್ 19 ಚಿತ್ರ ʼಟಾಕ್ಸಿಕ್ʼ ದ ಡೈರೆಕ್ಟರ್​ ಯಾರು ಗೊತ್ತಾ?

ಯಶ್​ ನಟನೆಯ ಮುಂದಿನ ಚಿತ್ರಕ್ಕೆ ‘ಟಾಕ್ಸಿಕ್’ ಟೈಟಲ್ ಫೈನಲ್ ಮಾಡಲಾಗಿದೆ. ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. ಯಶ್ ಅವರ ಲುಕ್ ಹೇಗಿರಬಹುದು ಎನ್ನುವ ಬಗ್ಗೆ ಒಂದು ಹಿಂಟ್ ನೀಡಲಾಗಿದೆ. ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆಯೂ ತಂಡ ಮಾಹಿತಿ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2025ರ ಏಪ್ರಿಲ್ 10ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನು ಯಶ್ ಇಷ್ಟರವರೆಗೆ ಮಾಡಿರುವ ಸಿನಿಮಾವನ್ನು ಪುರುಷರು ಡೈರೆಕ್ಟ್​ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಏಕೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್ಟ್​ ಹೇಳಿದ ಕೆಜಿಎಪ್​ ಸರಣಿಗಳು ಧೂಳೆಬ್ಬಿಸಿದ್ದಲ್ಲದೆ, ಸ್ಯಾಂಡಲ್​ವುಡನ್ನ ಎಲ್ಲರು ತಿರುಗಿ ನೋಡುವಂತೆ ಮಾಡಿದ್ದರು. ಆದರೀಗ ಯಶ್​ 19ನೇ ಸಿನಿಮಾ ‘ಟಾಕ್ಸಿಕ್’ ಅನ್ನು ಮಹಿಳಾ ಮಣಿಯೊಬ್ಬರು ನಿರ್ದೇಶಿಸುತ್ತಿದ್ದಾರೆ. ​ಗೀತು ಮೋಹನ್ ಎಂಬ ಮಲಯಾಳಂ ನಟಿ, ನಿರ್ದೇಶಕಿ ಈ ಸಿನಿಮಾ ಡೈರೆಕ್ಟ್​ ಮಾಡುತ್ತಿದ್ದಾರೆ.

ನಿರ್ದೇಶಕಿಯಾಗಿ ಗೀತು ಮೋಹನ್​ ದಾಸ್​ ಅವರು ಮಾಡಿರುವುದು ಎರಡು ಸಿನಿಮಾ ಮಾತ್ರ. ಮೊದಲ ಸಿನಿಮಾ ‘ಲೈಯರ್ಸ್​ ಡೈಸ್​’. ಎರಡನೇ ಸಿನಿಮಾ ‘ಮೂತೊನ್​’. ಈ ಎರಡೂ ಚಿತ್ರಗಳು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿವೆ. 87ನೇ ಆಸ್ಕರ್​ ಪ್ರಶಸ್ತಿಗೆ ಭಾರತದಿಂದ ‘ಲೈಯರ್ಸ್​ ಡೈಸ್​’ ಸಿನಿಮಾವನ್ನು ಸ್ಪರ್ಧೆಗೆ ಕಳಿಸಲಾಗಿತ್ತು. ಆದರೆ ನಾಮಿನೇಟ್​ ಆಗಿರಲಿಲ್ಲ. ಈ ಚಿತ್ರಕ್ಕೆ ‘ಅತ್ಯುತ್ತಮ ನಟಿ’, ‘ಅತ್ಯುತ್ತಮ ಛಾಯಾಗ್ರಹಣ’ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈಗ ಮೂರನೇ ಸಿನಿಮಾದಲ್ಲಿ ಅವರು ಯಶ್​ಗೆ ನಿರ್ದೇಶನ ಮಾಡುವ ಅವಕಾಶ ಪಡೆದಿದ್ದಾರೆ.

ಪರಭಾಷೆಗಳಲ್ಲಿ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಗೀತು ಮೋಹನ್​ದಾಸ್ ಅವರು ‘ಟಾಕ್ಸಿಕ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಟೈಟಲ್​ನ ಇಂದು (ಡಿಸೆಂಬರ್ 8) ರಿವೀಲ್ ಮಾಡಲಾಗಿದೆ. ಕೈಯಲ್ಲಿ ಗನ್ ಹಿಡಿದು, ತಲೆಗೆ ಟೋಪಿ ಹಾಕಿ, ಬಾಯಲ್ಲಿ ಸಿಗಾರ್ ಹಿಡಿದುಕೊಂಡಿರುವ ರೀತಿಯಲ್ಲಿ ‘ಟಾಕ್ಸಿಕ್’ ಪೋಸ್ಟರ್ ಮೂಡಿ ಬಂದಿದೆ.

Read More:

https://newskannada.com/gandhi-nagar/sandalwood/rock-star-yash-announced-19/08122023

Font Awesome Icons

Leave a Reply

Your email address will not be published. Required fields are marked *