ಯಾವತ್ತೂ ಎಲ್ಲರ ವಿಷಯದಲ್ಲಿ ಪೊಸಿಟಿವ್ ಆಗಿರಿ ಎಂದು ಯುವಜನತೆಗೆ ಕಿವಿ ಮಾತು ಹೇಳಿದ ಕಿಂಗ್‌ ಖಾನ್

‘ಯುವಜನತೆ ಹಲವು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ನಿಮ್ಮ ಸುತ್ತಲಿನವರು ಏನು ಮಾಡುತ್ತಿದ್ದಾರೆ, ಯಾವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಅವರು ಯುವಜನತೆಗೆ ಸಂದೇಶ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶಾರುಖ್ ಖಾನ್, ಬೇರೆಯವರನ್ನು ಹೇಗೆ ತುಳಿಯುವುದು ಎಂಬ ವಿಚಾರದ ಬಗ್ಗೆ ಯೋಚಿಸಬೇಡಿ. ನೆಗೆಟಿವ್ ವಿಚಾರಗಳು ಬೇಡ, ಯಾವತ್ತೂ ಎಲ್ಲರ ವಿಷಯದಲ್ಲಿ, ಜೀವನದ ಸಂಗತಿಗಳಲ್ಲಿ ಪೊಸಿಟಿವ್ ಆಗಿರಿ. ನೀವು ಒಳ್ಳೆಯ ಸಂಗತಿಗಳನ್ನು ಯೋಚಿಸುವ ಮೂಲಕ ಯಾವತ್ತೂ ಯಂಗ್ ಆಗಿ ಕಾಣುತ್ತೀರಿ, ನಿಮ್ಮ ಕಣ್ಣುಗಳಲ್ಲಿ ತೇಜಸ್ಸು ಹೊಮ್ಮುತ್ತಿರುತ್ತದೆ. ಈ ರೀತಿ ನೀವು ಇರಲು ಆರಂಭಿಸಿದರೆ ನಿಮ್ಮ ಕೆಲಸದಲ್ಲಿ ನೀವು ಬೇಗ ಯಶಸ್ಸು ಸಾಧಿಸುತ್ತೀರಿ. ಯಾವುದೇ ಸಾಧನೆ ಅಸಾಧ್ಯವಲ್ಲ ಎಂದು ನಂಬಿ ಅದರಂತೆ ಮುಂದುವರಿಯಿರಿ. ಲೈಫ್ ಬಗ್ಗೆ ಕೃತಜ್ಞರಾಗಿರಿ’ ಎಂದಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಬಾದ್‌ ಶಾ ನಟ ಶಾರುಖ್ ಖಾನ್ ಅವರು ಯುವ ಜನತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *