ಚಿಕ್ಕಬಳ್ಳಾಪುರ: ಯುಗಾದಿ ಹಬ್ಬವನ್ನು ಸಂಭ್ರಮಿಸಬೇಕಾದ ದಿನವೇ ಕತ್ತಲು ಕವಿದಂತೆ ತಂದೆ ಮಗ ದಾರುಣವಾಗಿ ಸಾವನಪ್ಪಿದ್ದಾರೆ.ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೂನೇಗಲ್ ಗ್ರಾಮದ ಬಳಿ ನಡೆದಿದೆ.ತಂದೆ ಗಂಗಿರೆಡ್ಡಿ (41), ಮಗ ಆದರ್ಶ (21) ಮೃತ ದುರ್ದೈವಿಗಳು.
ಜಿಲ್ಲೆಯ ಚೇಳೂರು ಮೂಲದ ನಿವಾಸಿಗಳಾದ ಇವರು ಬೆಂಗಳೂರಿನಿಂದ ಸ್ವಗ್ರಾಮ ಹರಿಗಾರಗುಡ್ಡಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.ಮುಂದೆ ಹೋಗುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗ ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.