ಯು.ಎ.ಇ ಯಲ್ಲಿ ನಡೆಯಲಿದೆ ಮೋದಿಯಿಂದ ಮೆಚ್ಚುಗೆ ಪಡೆದ ಬಸವರಾಜ್ ಉಮ್ರಾಣಿಯವರ ಆತಿಥ್ಯ ಸಮಾರಂಭ

ಯು.ಎ.ಇ: ಹೆಸರಾಂತ ಗಣಿತ್ಞರಾಗಿ ಹೆಸರು ಮಾಡಿರುವ ಬಸವರಾಜ್ ಉಮ್ರಾಣಿಯವರನ್ನು ಗೌರವಿಸುವ ಸಲುವಾಗಿ ದುಬೈನ ಯು.ಎ.ಇ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಆತಿಥ್ಯ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಯು.ಎ.ಇ ಯ ಎಲ್ಲಾ ಕನ್ನಡ ಸಂಘದ ಮುಖ್ಯಸ್ಥರು ಹಾಗು ಮುಖ್ಯ ಅಥಿತಿಗಳು ಉಪಸ್ಥಿತರಿರುವ ನಿರೀಕ್ಷೆಯಿದ್ದು, ಯು.ಎ.ಇ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷರಾದ ಶ್ರೀ ಶಶಿಧರ್ ನಾಗರಾಜಪ್ಪ ಹಾಗು ಸಂಘಟನಾ ಸಮಿತಿಯ ಇತರೆ ಸದಸ್ಯರು ಎಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

ಜ.೩೦ರ ಸಂಜೆ ೭ ಗಂಟೆಗೆ ದುಬೈಯ ಫಾರ್ಚ್ಯೂನ್ ಪ್ಲಾಜ಼ಾ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮಾನವ ಕಂಪ್ಯೂಟರ್ ಎಂದೇ ಪ್ರಸಿದ್ಧರಾಗಿರುವ ಗಣಿತಶಾಸ್ತ್ರಜ್ಞ ಬಸವರಾಜ್ ಉಮ್ರಾಣಿಯವರನ್ನು ಸನ್ಮಾನಿಸಲಾಗುತ್ತದೆ.

Font Awesome Icons

Leave a Reply

Your email address will not be published. Required fields are marked *