ಯೋಗಿ ಅದಿತ್ಯನಾಥ್‌  – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಲಕ್ನೋ: ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ ವ್ಯಕ್ತಿಗಳು ಅಪರಾಧವನ್ನು ನಿಲ್ಲಿಸಬೇಕು ಅಥವಾ ಅದಕ್ಕೆ ತಕ್ಕುದಾದ ಬೆಲೆಯನ್ನು ಪಾವತಿಸಲು ಸಿದ್ಧರಾಗಬೇಕು. ಎಂದು ಸಿಎಂ ಯೋಗಿ ಅದಿತ್ಯನಾಥ್‌  ಹೇಳಿದ್ದಾರೆ.

ಶಂಸಾಬಾದ್‌ನಲ್ಲಿ ಬಿಜೆಪಿ  ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದ್ದೇವೆ.  ಈಗ ಬಹುತೇಕ ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಹೇಳಿದರು.

2017ರ ಮೊದಲು ಪೊಲೀಸ್ ಠಾಣೆಗಳು ಸೂರ್ಯಾಸ್ತದ ನಂತರ ಬೀಗ ಹಾಕುತ್ತಿದ್ದವು. ಸಾಮಾನ್ಯ ಜನರು ಭಯಭೀತರಾಗಿದ್ದರು. ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಾಯಿತು ಆದರೆ ಅಪರಾಧಿಗಳು ಮೊದಲಿನಂತೆಯೇ ಇರುತ್ತದೆ ಎಂದು ಭಾವಿಸಿದ್ದರು.

ನಾವು ನಮ್ಮ ರಾಜ್ಯದಲ್ಲಿ ಅಪರಾಧದ ಬಗ್ಗೆ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ತಂದಿದ್ದೇವೆ. ಕ್ರಿಮಿನಲ್‌ಗಳು ಸುಧಾರಣೆಯಾಗಬೇಕು ಅಥವಾ ಅವರು ಬೆಲೆ ತೆರುವ ಆಯ್ಕೆಯನ್ನು ನೀಡಲಾಗಿದೆ ಎಂದು ಯೋಗಿ ಹೇಳಿದರು.

ಜಾಮೀನು  ಸಿಕ್ಕಿ ಪರಾರಿಯಾಗುತ್ತಿದ್ದವರು ಈಗ ತಾವಾಗಿಯೇ ಶರಣಾಗುತ್ತಿದ್ದಾರೆ. ಅಪರಾಧಿಗಳು ನಮ್ಮನ್ನು ಜೈಲಿಗೆ ಕಳುಹಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಈಗ ಅವರಿಗೆ ಜೈಲಿಗೆ ಹೋಗುವ ಭಯವಿದೆ. ಇನ್ನು ಮುಂದೆ ಯಾವುದೇ ಅಪರಾಧ ಮಾಡುವುದಿಲ್ಲ. ನಮ್ಮ ಪ್ರಾಣ ಉಳಿದರೆ ನಾವು ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ ಎಂಬ ಸಂದೇಶ ಇರುವ ಪ್ಲೇ ಕಾರ್ಡ್‌ ಹಿಡಿದು ಬರುತ್ತಿದ್ದಾರೆ ಎಂದರು.

ಕಳೆದ ವಾರ ಬಂದಾ ಜೈಲಿನಲ್ಲಿ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ ಸಾವನ್ನಪ್ಪಿದ ನಂತರ ಈ ಹೇಳಿಕೆ ಬಂದಿರುವುದು ವಿಶೇಷ. ಕುಟುಂಬಸ್ಥರು ವಿಷ ಪ್ರಾಶನ ಮಾಡಿ ಅನ್ಸಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದರೆ ಹೃದಯಾಘಾತದಿಂದ ಸಾವಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ನೀಡಿದೆ.

Font Awesome Icons

Leave a Reply

Your email address will not be published. Required fields are marked *