ರಶ್ಮಿಕಾಗೆ ಡಿಸೆಂಬರ್‌ ತಿಂಗಳಲ್ಲಿ ಅದೃಷ್ಟವಂತೆ

ಬೆಂಗಳೂರು: ಡಿಸೆಂಬರ್‌ ತಿಂಗಳು ನನಗೆ ಅದೃಷ್ಟದ ಮಾಸ ಎಂದು ಎಂದು ರಶ್ಮಿಕಾ ಹೇಳಿದ್ದಾರೆ. ಅವರ ಮೊದಲ ಚಿತ್ರ ‘ಕಿರಿಕ್ ಪಾರ್ಟಿ’ ಚಿತ್ರ ರಿಲೀಸ್ ಆಗಿದ್ದು ಡಿಸೆಂಬರ್​ನಲ್ಲಿ. ಸೂಪರ್ ಹಿಟ್ ಸಿನಿಮಾ ‘ಪುಷ್ಪ’ ಕೂಡ ಡಿಸೆಂಬರ್​ನಲ್ಲಿಯೇ ಬಿಡುಗಡೆ ಆಗಿತ್ತು. ಈ ಎರಡೂ ಚಿತ್ರಗಳು ರಶ್ಮಿಕಾ ವೃತ್ತಿ ಜೀವನದಲ್ಲಿ ಪ್ರಮುಖ ಎನಿಸಿಕೊಂಡಿದೆ. ಇದರ ಜೊತೆ ಇನ್ನೂ ಕೆಲವು ಸಿನಿಮಾಗಳು ಡಿಸೆಂಬರ್​ನಲ್ಲಿ ರಿಲೀಸ್ ಆಗಿದೆ. ಈಗ ಬಹುನಿರೀಕ್ಷಿತ ‘ಅನಿಮಲ್’ ಸಿನಿಮ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗುತ್ತಿದೆ.

‘ಡಿಸೆಂಬರ್ ನನಗೆ ಯಾವಗಲೂ ಲಕ್ಕಿ ತಿಂಗಳು. ಕಿರಿಕ್ ಪಾರ್ಟಿ, ಚಮಕ್, ಅಂಜನಿಪುತ್ರ ಸೇರಿ ಅನೇಕ ಚಿತ್ರಗಳು ಇದೇ ತಿಂಗಳಲ್ಲಿ ರಿಲೀಸ್ ಆಗಿವೆ. ಈ ತಿಂಗಳಲ್ಲಿ ರಿಲೀಸ್ ಆದ ಚಿತ್ರಗಳು ಮೆಚ್ಚುಗೆ ಪಡೆದಿವೆ. ಡಿಸೆಂಬರ್​ನಲ್ಲಿ ರಿಲೀಸ್ ಆಗುತ್ತಿರುವ ನನ್ನ ಐದನೇ ಸಿನಿಮಾ ಅನಿಮಲ್. ಈ ಚಿತ್ರದ ಕುರಿತು ನಾನು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *