ಮುಂಬೈ: ಡಿಸೆಂಬರ್ 5 ರಾತ್ರಿ ಮುಂಬೈನ ಜುಹು ರಸ್ತೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸನ್ನಿ ಡಿಯೋಲ್ ರಸ್ತೆಯಲ್ಲಿ ತಿರುಗಾಡುತ್ತಿರುವ ವೀಡಿಯೊ ಒಂದು ವೈರಲ್ ಆಗಿದೆ. ಸನ್ನಿ ಡಿಯೋಲ್ ರಸ್ತೆ ಮಧ್ಯದಲ್ಲಿ ನಡೆದಾಡುವಾಗ ಕುಡಿದಿದ್ದಾರೆಯೇ ಎಂದು ನೆಟಿಜನ್‌ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಡಿಯೋಲ್ ತನ್ನ ಹಲವು ಸಂದರ್ಶನಗಳಲ್ಲಿ ತಾನು ದುಶ್ಚಟಗಳಿಂದ ದೂರು ಇರುವ ವ್ಯಕ್ತಿ ಎಂದು ಹೇಳಿದ್ದಾರೆ. ಆದರೆ ಈ ವೀಡಿಯೊ ನೋಡಿದ ಬಳಿಕ ಅಭಿಮಾನಿಗಳು ಶಾಕ್ ಆದರು.
ಆದರೆ ಅಸಲಿಗೆ ನಟ ಮುಂಬೈನಲ್ಲಿ ತಮ್ಮ ಮುಂದಿನ ಸಫರ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹೀಗಾಗಿ ಶೂಟಿಂಗ್‌ನಲ್ಲಿರುವ ಈ ವಿಡಿಯೋ ವೈರಲ್ ಆಗಿದೆ. ಸನ್ನಿ ಅವರು ನಟಿಸುತ್ತಿರುವ ಈ ಚಿತ್ರವನ್ನು ನಟ-ನಿರ್ಮಾಪಕ ಶಶಾಂಕ್ ಉದಪುರ್ಕರ್ ನಿರ್ದೇಶಿಸುತ್ತಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಟ ಸನ್ನಿ ಡಿಯೋಲ್ ಕೂಡ ಶೂಟಿಂಗ್ ವಿಡಿಯೋವನ್ನು ಪ್ರಕಟಿಸಿ ಗಾಸಿಪ್‌ಗಳ ಪ್ರಯಾಣ ಇಲ್ಲಿ ತನಕ ಮಾತ್ರ ಎಂದು ತನ್ನ ಬಗ್ಗೆ ಹಬ್ಬಿರುವ ರೂಮರ್ ಗೆ ಅಂತ್ಯ ಹಾಡಿದ್ದಾರೆ.
Afwaahon ka ‘Safar’ bas yahin tak 🙏🙏#Shooting #BTS pic.twitter.com/MS6kSUAKzL
— Sunny Deol (@iamsunnydeol) December 6, 2023