ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ: ಯುವಕರ ಆಕ್ರೋಶ

ಕೃಷ್ಣರಾಜಪೇಟೆ: ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ಗ್ರಾಮ ವಿರುದ್ಧ ಗ್ರಾಮದ ಯುವಕರು ಪ್ರತಿಭಟನೆ ನಡೆಸಿ, ಕಾಮಗಾರಿ ತಡೆಹಿಡಿಯುವಂತೆ ಆಗ್ರಹಿಸಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮದಲ್ಲಿ ಜನ-ಜಾನುವಾರುಗಳು ಓಡಾಡುವ ಗ್ರಾಮದ ಮುಖ್ಯ ರಸ್ತೆಯು ಗುಂಡಿ ಬಿದ್ದು ಹಾಳಾಗಿದ್ದರೂ ದುರಸ್ತಿ ಮಾಡದೇ, ಕೊಮ್ಮೇನಹಳ್ಳಿ ಗ್ರಾಮದಿಂದ ರೈತರ ಜಮೀನುಗಳಿಗೆ ಹಾಗೂ ಕೆರೆಗೆ ಹೋಗುವ ರಸ್ತೆಯ ಮೆಟಲಿಂಗ್ ಕಾಮಗಾರಿಯನ್ನು ಮನಸೋಇಚ್ಛೆ ಕಳಪೆ ಗುಣಮಟ್ಟದಲ್ಲಿ ನಡೆಸಿ ಸರ್ಕಾರದ ೧೦ ಲಕ್ಷರೂ ಹಣವನ್ನು ಲೂಟಿ ಹೊಡೆಯಲು ಸಂಚು ನಡೆಸಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ

ಕರವೇ ಹೋಬಳಿ ಘಟಕದ ಅಧ್ಯಕ್ಷ ಅನಿಲ್‌ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಯುವಕರು ಗ್ರಾಮದೊಳಗೆ ಅವಶ್ಯಕತೆ ಇರುವ ಸ್ಥಳಗಳಲ್ಲಿ ಗುಂಡಿ ಬಿದ್ದಿರುವ ಗ್ರಾಮದ ಪರಿಮಿತಿ ಒಳಗಿನ ರಸ್ತೆ ಕಾಮಗಾರಿ ಮಾಡಿಸಿ ರಸ್ತೆ ಅಭಿವೃದ್ಧಿ ಪಡಿಸದೆ, ಗ್ರಾಮದ ಜನರಿಗೆ ಬೇಡದಿರುವ ಸ್ಥಳದಲ್ಲಿ ಅನಾವಶ್ಯಕವಾಗಿ ಕಾಮಗಾರಿ ನಡೆಸಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ.

ಮಾಡಿರುವ ಕಾಮಗಾರಿಯೂ ಕಳಪೆ ಮಟ್ಟದಿಂದ ಕೂಡಿದೆ ಈಗ ರಸ್ತೆಯ ಮೆಟಲಿಂಗ್ ಕಾಮಗಾರಿಯನ್ನು ನಡೆಸಲಾಗುತ್ತಿದೆ. ರಸ್ತೆಯ ಎರಡು ಬದಿಗಳಲ್ಲೂ ಚರಂಡಿ ಕಾಮಗಾರಿ ನಡೆಸಿ, ರಸ್ತೆಯ ಮೇಲೆ ಗ್ರಾವೆಲ್ ಮಣ್ಣನ್ನು ಹರಡಿ ಜಲ್ಲಿ ಹಾಕಿಸಿ ರೋಲಿಂಗ್ ಮಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಬೇಕು. ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಇಂಜಿನಿಯರ್ ಸಮಕ್ಷಮದಲ್ಲಿ ಕಾಮಗಾರಿ ನಡೆಸಬೇಕು, ಅದನ್ನು ಬಿಟ್ಟು ಕಾಮಗಾರಿಯ ಅಂದಾಜು ಪಟ್ಟಿ ಇಲ್ಲದಂತೆ ತಮಗಿಷ್ಟ ಬಂದಂತೆ ಮನಸ್ಸೋ ಇಚ್ಚೆ ಕಾಮಗಾರಿ ನಡೆಸಲಾಗುತ್ತಿದೆ.

ಊರಿನಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕೆಲಸವು ಗುಣಮಟ್ಟದಿಂದ ಕೂಡಿರಬೇಕು. ಸರ್ಕಾರಿ ರಜಾ ದಿನದಂದು ಸಂಬಂಧಪಟ್ಟ ಸೆಕ್ಷನ್ ಇಂಜಿನಿಯರ್ ಇಲ್ಲದೆ ಕಳಪೆ ಕಾಮಗಾರಿ ನಡೆಸಬೇಡಿ ಎಂದು ಗುತ್ತಿಗೆದಾರ ಬಲದೇವ ಅವರನ್ನು ಗ್ರಾಮದ ಯುವಕರು ತರಾಟೆಗೆ ತೆಗೆದುಕೊಂಡರಲ್ಲದೆ, ಕಾಮಗಾರಿಯನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಇಂಜಿನಿಯರ್ ಲೋಕೇಶ್ ಹಾಗೂ ಗುತ್ತಿಗೆದಾರ ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *